ಮಹಲಿಂಗಪುರ

ಹನುಮ ಜಯಂತಿ ಗದಾ ಪೂಜೆ; ದೇಶ, ಧರ್ಮ ರಕ್ಷಣೆಯ ಪ್ರತಿಜ್ಞೆ

ಹನುಮ ಜಯಂತಿ ಗದಾ ಪೂಜೆ; ದೇಶ, ಧರ್ಮ ರಕ್ಷಣೆಯ ಪ್ರತಿಜ್ಞೆ

ಲೋಕದರ್ಶನ ವರದಿ 

ಮಹಾಲಿಂಗಪುರ 02 : ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸ್ಥಳೀಯ ಮಾರುತಿ ದೇವಾಲಯದಲ್ಲಿ ಗದೆ ಪೂಜೆ ನೆರವೇರಿಸಿ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರತಿಜ್ಞೆ ಮಾಡಲಾಯಿತು. ಪ್ರಭು ಶ್ರೀರಾಮಚಂದ್ರ,ವೀರ ಹನುಮಂತರಾಯಪ್ಪ ಸಾಕ್ಷಿಯಾಗಿ ನಾವು ಪ್ರತಿಜ್ಞೆ ಮಾಡುತ್ತಿದ್ದೇವೆ, ದೇವತೆ, ದೇಶ,   ಮತ್ತು ಧರ್ಮ ಯುಗಳ ಯಾವುದೇ ರೀತಿಯ ವಿಡಂಬನೆಯನ್ನು ನಾವು ಸಹಿಸುವುದಿಲ್ಲ. ಜೈ ಶ್ರೀ ರಾಮ, ದೇಶ ಮತ್ತು ಧರ್ಮದ ಮೇಲೆ ಬಂದಿರುವ ಪ್ರತಿಯೊಂದು ಸಂಕಟವನ್ನು ತೀವ್ರ ಪ್ರತಿಕಾರ ಮಾಡಿ ಹಿಮ್ಮೆಟ್ಟಿಸಲು ನೀವೇ ನಮಗೆ ಬಲ ನೀಡಿ, ಹಿಂದೂ ರಾಷ್ಟ ಎಂದರೆ ರಾಮರಾಜ್ಯ, ಅದು ನಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ ಮತ್ತು ಅದನ್ನು ನಾವು ಪಡೆದೇ ಪಡೆಯುವೆವು ಅದಕ್ಕಾಗಿ ನಾವು ಪ್ರಭು ಶ್ರೀ ರಾಮನ ವಾನರ ಸೇನೆ ಆಗುವೆವು, ಪ್ರಭು ಶ್ರೀರಾಮ, ಭಗವಾನ್ ಶ್ರೀ ಕೃಷ್ಣ, ಛತ್ರಪತಿ ಶಿವಾಜಿ ಮಹಾರಾಜ ಇವರ ಹಾಕಿ ಕೊಟ್ಟಿರುವ ಆದರ್ಶ ಪಥದಲ್ಲಿ ಮುನ್ನಡೆಯುವೆವು. ನಮ್ಮ ಸರ್ವ ಶ್ರೇಷ್ಠವಾದ ಪೂರ್ವಜರು ಋಷಿಮುನಿಗಳು ತೋರಿಸಿಕೊಟ್ಟ ಪರಂಪರೆ ನಾವು ಅಭಿಮಾನದಿಂದ ಗೌರವಿಸುವೆವು,

ಅವರು ನಿರ್ಮಿಸಿರುವ ಧರ್ಮ ಗ್ರಂಥ, ಸಂಸ್ಕೃತಿ ಪರಂಪರೆ ಮುಂತಾದವುಗಳನ್ನು ನಾವು ಚಾಚೂ ತಪ್ಪದೆ ಪಾಲಿಸುವೆವು. ನಾವು ನಮ್ಮ ದೇವಸ್ಥಾನಗಳನ್ನು ಪ್ರಾಣ ಪಣಕೆಟ್ಟು ರಕ್ಷಣೆ ಮಾಡುವೆವು ಹಿಂದೂ ರಾಷ್ಟ್ರ ನಮ್ಮ ಜೀವನದ ಧ್ಯೇಯವಾಗಿದ್ದು ಅದಕ್ಕಾಗಿ ಕೊನೆಯ ಶ್ವಾಸದವರೆಗೆ ಕಾರ್ಯನಿರ್ವಹಿಸುವೆವು. ಹಿಂದೂ ರಾಷ್ಟ್ರ ಸ್ಥಾಪನೆ ಆಗುವ ತನಕ ನಾವು ಶಾಂತವಾಗಿ ಕುಳಿತುಕೊಳ್ಳುವುದಿಲ್ಲ ಇನ್ನು ಒಂದೇ ಗುರಿ ಹಿಂದು ರಾಷ್ಟ್ರ ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರ ಎಂಬ ಪ್ರತಿಜ್ಞೆ  ಮಾಡಿದರು.  ಹಿಂದೂ ಸಂಘಟನೆಯ ಮುಖಂಡರಾದ ಮಹಾಲಿಂಗಪ್ಪ ಕಂಕಣವಾಡಿ, ರವಿ ಜವಳಗಿ, ರಾಘವೇಂದ್ರ ಗರಗಟಗಿ,ಮಹಾಲಿಂಗ ಹಾವನಳ್ಳಿ,ಧರ್ಮರಾಜ ಪೂಜಾರಿ, ಶ್ರೀನಿಧಿ ಕುಲಕರ್ಣಿ,ರಾಘು ಪವಾರ, ಹೇಮಂತ ಗುರವ,ರಾಘು ಶಿರೋಳ, ಬಸವರಾಜ ಮುರಾರಿ, ಸಾಗರ ಪರೀಟ, ಭರತ ಕದ್ದಿಮನಿ, ಹನಮಂತ ಮಾದರ,ಲಕ್ಷ್ಮೀ ಹಳ್ಳಿ ,ಶೋಭಾ ಅಂಬಿ, ಸಾಗರ ಹಿಕಡಿ, ಮಹಾಲಿಂಗ ಬೀಳಗಿ ಶಿವಾನಂದ ಹುಣಶ್ಯಾಳ, ರಾಜು ಘಟ್ಟೆಪ್ಪನವರ, ಪ್ರಜ್ವಲ ಯಾದವಾಡ, ಚೇತನ ಅವರಾದಿ, ಮಹಾಲಿಂಗ ಕೊಡತಿ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ