ಮಹಲಿಂಗಪುರ

ಗುರುವಿನ ಮಾರ್ಗದರ್ಶನ ಸುಖ ಜೀವನಕ್ಕೆ ದಾರಿ : ಸತ್ಯಪ್ಪ

ಗುರುವಿನ ಮಾರ್ಗದರ್ಶನ ಸುಖ ಜೀವನಕ್ಕೆ ದಾರಿ : ಸತ್ಯಪ್ಪ

ಮಹಾಲಿಂಗಪುರ : ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ, ಸನ್ಮಾರ್ಗದಲ್ಲಿ ನಡೆಯಬೇಕು ಸತ್ಯ ನುಡಿಯಬೇಕು, ಶುದ್ಧ ಕಾಯಕ ಮಾಡಬೇಕು, ನೆಮ್ಮದಿ ಸಿಗಬೇಕಾದರೆ, ಒಬ್ಬ ಸದ್ಗುರುವಿನ ಮಾರ್ಗದರ್ಶನ ಬೇಕು, ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನ ಆಗುತ್ತದೆ, ಎಂದು ವೆಂಕಟಾಪುರದ ಸತ್ಯಪ್ಪ ಮಹಾರಾಜರು ಹೇಳಿದರು.

ಅವರು ನಗರದ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಶುಕ್ರವಾರ ಸಂಜೆ ನಡೆದ  176 ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ ಭಾವಶುದ ಸತ್ಯವನ್ನು ತಿಳಿಸುವ ಸಾಮಥ್ರ್ಯ ಈ ಇಂಚಗೇರಿ ಸತ್ ಸಂಪ್ರದಾಯ ಎಲ್ಲ ಸದ್ಗುರುಗಳಲ್ಲಿ ನಾವು ಕಾಣಬಹುದು ಶ್ರೀಗುರುಮಾಧವಾನಂದರು ಎಲ್ಲ ಸಮುದಾಯದ ಭಕ್ತರನ್ನು ಭಕ್ತರೆಲ್ಲಿರಿಗೂ ಮನುಜ ಕುಲ ಒಂದೇ ಎಂದು ಮಾರ್ಗದಲ್ಲಿ ಹಚ್ಚಿದ ಕೀರ್ತಿ ಇಂಚಗೇರಿ ಸಂಪ್ರದಾಯದ ಗುರುಗಳಿಗೆ ಸಲ್ಲುತ್ತದೆ.

ಮಾನವ ಜನ್ಮದ ಸಫಲತೆಗಾಗಿ  ರಾಮದಾಸ್ ಮಹಾರಾಜರು ದಾಸಭೋಧ ಎಂಬ ಗ್ರಂಥವನ್ನು ಸನ್ಮಾರ್ಗ ತೋರುವ ದಾರಿ ದೀಪ ಇದಾಗಿದೆ ಸಮರ್ಥಿ ಸದ್ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಜನ್ಮಕ್ಕೆ ಪರಿಪೂರ್ಣತೆ ಸಾಧಿಸಲು ಸಾಧ್ಯ.ಸತ್ಯಾಸತ್ಯ್ಯತೆ ತಿಳಿಯಲು ಮತ್ತು ಸಗುಣ ಹಾಗೂ ನಿರ್ಗುಣಪರಬ್ರಹ್ಮ ಸ್ವರೂಪದ ಬಗ್ಗೆ ಇರುವ ಸಂಶಯಗಳನ್ನು ತೊಡೆದು ಹಾಕಿದರೆ ನೆಮ್ಮದಿ ಜೀವನಕ್ಕೆ ದಾರಿ ಆಗುತ್ತದೆ.

     ಡಾ ಕದ್ದಿಮನಿ : ತ್ರಿಗುಣಗಳು, ಅಂತರಾತ್ಮ ಇವುಗಳಲ್ಲಿ ಯಾವುವು ವ್ಯಾಪಕ ಮತ್ತು ಇವುಗಳಲ್ಲಿಯ ಭೆಧಗಳನ್ನು ತಿಳಿಯಲು ಹಾಗೂ ಆತ್ಮನು ಸಗುಣನೊ ನಿರ್ಗುಣನೊ ಎಂಬ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯಲು ಸಮರ್ಥಿ ಸದ್ಗುರುವಿನ ಮಾರ್ಗದರ್ಶನದಲ್ಲಿ ಪಡೆದ ಜ್ಞಾನವೆ ಮುಖ್ಯ ಆ ಮಹತ್ತರ ವಾದ ವಿವೇಕದಿಂದಲೇ ತಿಳಿಯುತ್ತದೆ ಆಕಾಶ ಮತ್ತು ನಿರ್ಗುಣ ಬ್ರಹ್ಮವು ಮಾತ್ರ ಘನದಟ್ಟಿವಾಗಿ ಪೂರ್ಣ ವ್ಯಾಪಕವಾಗಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ.ಆಗ ಮಾತ್ರ ಮಾನವ ಮಹಾಮಾನವ, ದೇವ ಮಾನವನಾಗಬಲ್ಲ ಎಂಬುದನ್ನು ಈ ಸತ್ ಸಂಪ್ರದಾಯ ಎಲ್ಲ ಸದ್ಗುರುಗಳಲ್ಲಿ ನಾವು ಕಾಣಬಹುದು.

 ಭಗವಂತನ ನಿತ್ಯ ನೇಮ ಯಾವಾಗಲೂ ನಡೆಯುತ್ತಿರಬೇಕು ನಿಲ್ಲಬಾರದು ತಾನು ಮಾಡುತ್ತಾ ಬೇರೆಯವರಿಗೆ ಕಲಿಸುತ್ತಿರಬೇಕು ಹಾಗೂ ಹೊಸ ಹೊಸ ಭಕ್ತರನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿರುವವನೇ ನಿಜವಾದ ವಿವೇಕಿ ಜ್ಞಾನಿ ಎನಿಸಿಕೊಳ್ಳುತ್ತಾನೆ. ಎಂದು ಹೇಳಿದರು.

ಮಾರಾಪುರದ ಶ್ರೀಮಂತ ಮಹಾರಾಜರು, ವಲಯ ಕ ಸಾ ಪ ಘಟಕದ ಅಧ್ಯಕ್ಷರಾದ ಬಸವರಾಜ್ ಮೇಟಿ ಮಾತನಾಡಿದರು ಶ್ರೀಶೈಲ ರೊಡ್ಡನವರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶ್ರೀಶೈಲಪ್ಪ ರೊಡ್ಡನವರ ಬಾಬು ಜಾಡರ .ಮಹೇಶ ಇಟಕನ್ನವರ, ಶಿವಾನಂದ ಜಮಖಂಡಿ, ಮಹಾಲಿಂಗಪ್ಪ ಹೊಸೂರ, ಯಲ್ಲಣ್ಣಗೌಡ ಬಲವಂತಗೌಡ ಪಾಟೀಲ, ಸಿದ್ದಪ್ಪ ಸಂಶಿ,ಗುರುಶಿದ್ದ ಅಂಬಿ. ಡಾ. ಗಂಗಾಧರ್ ಎಮ್ ಮಗದುಮ.ಡಾ  ರಾಚಪ್ಪ ಚಿಮ್ಮಡ .ಚಂದ್ರಪ್ಪಣ್ಣ ಡೊಣಿ. ಗುರುಪಾದ ಉರಬಿನ್ನವರ.ಗುರಪ್ಪ ಪಂಕಿ. ಮಟಗಾರ ಗುರುಗಳು. ಪ್ರಕಾಶ್ ಗೊಕಾವಿ. ಗಿರೀಶ್ ಜಾಧವ್. ಗುರು ಕದ್ದಿಮನಿ. ಷನ್ಮುಖ ಕದ್ದಿಮನಿ. ಮೈತ್ರಾದೇವಿ ಕದ್ದಿಮನಿ.ಹಾಗೂ ನಂದಗಾವ.ಕೆಸರೊಪ್ಪ ಸದ್ಭಕ್ತರು ಸೇರಿ ಹಲವರು ಉಪಸ್ಥಿತರಿದ್ದರು, ಲಕ್ಷ್ಮಣ ಬೀಳಗಿ ಬಂಧುಗಳು ಮಹಾ ಪ್ರಸಾದ ವ್ಯವಸ್ಥೆ ಮಾಡಿದರು ,ಕಾರ್ಯಕ್ರಮವನ್ನು ಡಾ ಸಂಗಮೇಶ್ ಹಿಡಕಲ್ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ