ಸಿದ್ದಾರೂಢ ದೇವಸ್ಥಾನ ಸಮೀಪ ನೂತನ ಸಮುದಾಯ ಭವನಕ್ಕೆ ಭೂಮಿಪೂಜೆ
ಲೋಕದರ್ಶನ ವರದಿ
ಯರಗಟ್ಟಿ 10: ಸಮೀಪದ ಕೊಡ್ಲಿವಾಡ ಗ್ರಾಮದ ಸಿದ್ಧಾರೂಢ ದೇವಸ್ಥಾನದ ಹತ್ತಿರ 25 ಲಕ್ಷ ರೂ. ವೆಚ್ಚದ ನೂತನ ಸಮುದಾಯ ಭವನ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನ ನೆರವಾಗಲಿದೆ ಹಾಗೂ ಗ್ರಾಮದ ಮೂಲಸೌಕರ್ಯಗಳನ್ನು ಬಲಪಡಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಮ್ಮ ಸರ್ಕಾರ ಸದಾ ಬದ್ಧರಾಗಿದ್ದೆ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಬಸವರಾಜ ಸತ್ತೂರಿ, ಹನಮಂತ ರಂಗಾಪೂರ, ಬಾಳೇಶ ಕೌಜಲಗಿ, ಅರ್ಜುನ ಆಲದಕಟ್ಟಿ, ಪ್ರಕಾಶ ವಾಲಿ, ಮಲಿಕಸಾಬ ಬಾಗವಾನ ವೆಂಕಣ್ಣಾ ಕಳ್ಳಿಗುದ್ದಿ, ಶಂಕರ ಅಂಗಡಿ, ಈರನಗೌಡ ಪಾಟೀಲ, ಸಂಗಪ್ಪ ಹಳೆಮನಿ, ಸುನೀಲ ತಳವಾರ, ಹಣಮಂತ ಕುರಿ, ಅಜ್ಜಪ್ಪ ಬಂಗೆಪ್ಪಗೋಲ, ಯಲ್ಲಪ್ಪ ಯರಗಣವಿ, ದುಂಡಪ್ಪ ಬಗರನಾಳ, ಪ್ರಶಾಂತ ಸೊಪ್ಪಡ್ಲ, ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖ ಮುಖಂಡರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಕೊಡ್ಲಿವಾಡ ಗ್ರಾಮಸ್ಥರು ಉಪಸ್ಥಿತರಿದ್ದರು.