ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಐಹೊಳೆ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಐಹೊಳೆ

ಲೋಕದರ್ಶನ ವರದಿ 


ರಾಯಬಾಗ 05: ರಾಜ್ಯ ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳ ಜಾರಿ ಮಾಡುವುದರ ಮೂಲಕ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಮ್‌.ಐಹೊಳೆ ಹೇಳಿದರು.  

ಶನಿವಾರ ತಾಲೂಕಿನ ಕಂಕಣವಾಡಿ, ಚಿಂಚಲಿ ಹಾಗೂ ಮಂಟೂರ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಒಟ್ಟು 2 ಕೋಟಿ ರೂ. ಅನುದಾನದಲ್ಲಿ ಕಂಕಣವಾಡಿ ಗ್ರಾಮದ ಎಸ್‌ಟಿ ಕಾಲೋನಿಗೆ ಕೂಡು ರಸ್ತೆ ಹಾಗೂ ಮಂಟೂರ ಗ್ರಾಮದ ಎಸ್‌.ಟಿ.ಕಾಲೋನಿಗೆ ಕೂಡು ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು ತಾವು ಬೆಳೆದ ಕಬ್ಬು ಬೆಳೆಗಳನ್ನು ಕಾರ್ಖಾನೆಗಳಿಗೆ ಸಾಗಿಸಲು ರಸ್ತೆ ಸುಧಾರಣೆ ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ಮಾಡುವಂತೆ ಸೂಚಿಸಿದರು.  

ಪಿಡಬ್ಲ್ಯುಡಿ ಎಇಇ ಆರ್‌.ಕೆ.ನಿಂಗನೂರೆ, ಎಇ ಸಿ.ಎಸ್‌.ಕಾಂಬಳೆ, ಸದಾಶಿವ ಘೋರೆ​‍್ಡ, ಅಣ್ಣಾಸಾಹೇಬ ಖೆಮಲಾಪೂರೆ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಕೆ.ಬಿ.ದೇಸಾಯಿ, ಪ್ರಕಾಶ ಹುಕ್ಕೇರಿ, ಅಪ್ಪಾಸಾಬ ದೇಸಾಯಿ, ಸದಾನಂದ ಪಾಟೀಲ, ನಾಗಯ್ಯ ಹಿರೇಮಠ, ಮುತ್ತೇಪ್ಪ ನಾಯಿಕ, ನಟರಾಜ ಮಾವರಕರ, ಮೋಹನ ದೇಸಾಯಿ, ಭೀಮಪ್ಪ ನಾಯಿಕವಾಡಿ, ಬಸು ಐನಾಪೂರೆ, ರಮೇಶ ಪೂಜಾರಿ, ಅಪ್ಪಯ್ಯ ಪೂಜಾರಿ, ಮಹಾಲಿಂಗ ಮುದ್ದಾಪೂರೆ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ