ಧಾರವಾಡ - ಹುಬ್ಬಳ್ಳಿ

ಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಲೋಕದರ್ಶನ ವರದಿ 


ಧಾರವಾಡ 8 : ನಗರದ ಕೆಲಗೇರಿ ರಸ್ತೆಯ ಶಾಂತಿ ನಿಕೇತನ ನಗರದಲ್ಲಿರುವ   ಕರಿಯಮ್ಮ ದೇವಸ್ಥಾನದಲ್ಲಿ ಬರುವ ರವಿವಾರ ಅಕ್ಟೋಬರ್ 11 ರಿಂದ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಾಂತಿ ನಿಕೇತನ ನಗರದಲ್ಲಿ ನೆಲೆಗೊಂಡಿರುವ ಕರಿಯಮ್ಮ ದೇವಿಯನ್ನು   ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ತ್ರಿಗುಣಾತ್ಮಕ ಸ್ವರೂಪಳೆಂದು ಹೇಳಲಾಗುತ್ತಿದೆ. ದೇವಿಯು ನಂಬಿದ ಭಕ್ತರು ಮತ್ತು ರೈತರಿಗೆ ಆದಿಶಕ್ತಿಯಾಗಿದ್ದಾಳೆ 

ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ ಮಾಡಲಾಗುತ್ತಿದೆ. ರವಿವಾರ ಅ. 11 ರಂದು ರೇಣುಕಾ ಯಲ್ಲಮ್ಮ, ಅ.12 ರಂದು ಗಾಯತ್ರಿ, ಅ.13 ರಂದು ಪದ್ಮಾವತಿ, ಅ. 14 ರಂದು ಅಂಬಾ ಭವಾನಿ ಅ.15 ರಂದು ಸರಸ್ವತಿ, ಅ.16 ರಂದು ಲಕ್ಷಮಿ ದೇವಿ, ಅ.17 ರಂದು ಶಾಖಾಂಬರಿ, ಅ. 18 ರಂದು ಅನ್ನಪೂರ್ಣೇಶ್ವರಿ, ಅ.19 ರಂದು ಮಹಾಗೌರಿ ಹಾಗೂ ಅ.20 ರಂದು ಮಹಿಷಾಸುರ ಮರ್ದಿನಿ ದೇವಿಯ ಅಲಂಕಾರ ಮಾಡಲಾಗುತ್ತಿದೆ.  ಉತ್ಸವದ ಅಂಗವಾಗಿ ಶುಕ್ರವಾರ ಅ.16 ರಂದು ಸಾಯಂಕಾಲ 4.30 ಕ್ಕೆ ಸುಮಗಂಲೆಯರಿಂದ ಕುಂಕುಮಾರ್ಚಣೆ ನೆರವೇರಲಿದೆ.

ಪ್ರತಿದಿನ ರಾತ್ರಿ 9 ಗಂಟೆಗೆ ಅನ್ನ ಸಂತರೆ​‍್ಣ ಇರುತ್ತದೆ. ಅ. 20 ರಂದು ಬೆಳ್ಳಿಗ್ಗೆ ಸಂಕಲ್ಪ ಕಾಕಡಾರತಿ ಮತ್ತು ಸಂಜೆ 4.30 ಕ್ಕೆ ಅಲಂಕೃತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಎಲ್ಲ ಕಾಯರ್ಕಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್‌ನ ಚೇರ್ಮನ್ ರು ಮತ್ತು ಶಾಸಕರಾದ ಎನ್‌.ಎಚ್‌. ಕೋನರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಈಗಿರುವ ಸಭಾಭವನವನ್ನು ಅಲಂಕೃತ ಸಭಾಭವನನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದ್ದು, ಭಕ್ತರು ತನು - ಮನದಿಂದ ಸಹಾಯ ಮತ್ತು ಸಹಕಾರ ನೀಡುವಂತೆ ಅವರು ವಿನಂತಿಸಿದ್ದಾರೆ.

ಒಂಬತ್ತು ದಿನಗಳ ಉತ್ಸವವನ್ನು ಯಶಸ್ವಿಗೊಳಿಸಲು ಟ್ರಸ್ಟ್‌ನ ಪದಾಧಿಕಾರಿಗಳಾದ ಕೆ.ಎನ್‌.ಕುರಕುರಿ, ಬಿ.ಟಿ ರೆಡ್ಡಿ, ಮಹಾವೀರ ಉಪಾಧ್ಯೆ, ವಿಶ್ವನಾಥ ಯಲಿಗಾರ, ಎನ್‌.ಕೆ. ಅರಳಿಕಟ್ಟಿ, ಎಸ್‌.ಕೆ ಗಾಳಿ, ಬಿ.ಜೆ.ಪವಾರ, ಅಜಿತ್ ಸಾಣಿಕೊಪ್ಪ, ಶೈಲಜಾ ಅಂಬಡಗಟ್ಟಿ ಹಾಗೂ ಮತಿ ಹೇಮಾವತಿ ಪೂಜಾರ ಅವರು ಶ್ರಮಿಸುತ್ತಿದ್ದಾರೆ. 


ಸುದ್ದಿ ಓದಿ