ಎಲಬುರ್ಗ

ಗ್ರಾಪಂಗೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರೀಯೇ ಆರಂಭ

ಗ್ರಾಪಂಗೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರೀಯೇ ಆರಂಭ

ಯಲಬುರ್ಗಾ 18: ಅವಧಿ ಮುಕ್ತಾಯವಾಗಲಿರುವ ತಾಲೂಕಿನ ಸಂಕನೂರು ಮತ್ತು ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಿದೆ. ರಾಜ್ಯ ಚುನಾವಣಾ ಆಯೋಗ ಅವಧಿ ಮುಕ್ತಾಯವಾಲಿರುವ ಈ ಎರಡು ಗ್ರಾಪಂಗೆ ಚುನಾವಣೆ ನಡೆಯಲಿದೆ. ಮಾ. 15ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಾ 19ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಾ,22 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ಈ ಎರಡು ಗ್ರಾಪಂಗಳಿಗೆ ಮಾ. 29ರಂದು ಮತದಾನ ಜರಗಲಿದೆ.

ಹಿರೇಮ್ಯಾಗೇರಿ ಮತ್ತು ಸಂಕನೂರು ಗ್ರಾಪಂಗಳಿಗೆ ಚುನಾವಣೆ ತಡವಾಗಿ ನಡೆದಿದ್ದರಿಂದ ಈಗ ಅವಧಿ ಮುಕ್ತವಾಗಲಿದೆ. ಈ ನಿಟ್ಟಿನಲ್ಲಿ ಹಿರೇಮ್ಯಾಗೇರಿ ಗ್ರಾಪಂಗೆ ಒಟ್ಟು 13 ಜನ ಸದಸ್ಯರಿದ್ದು. ಹಿರೇಮ್ಯಾಗೇರಿ, ಹೊಸೂರು ಗ್ರಾಪಂಗಳು ಒಳಗೊಂಡಿದೆ. ಅಲ್ಲದೇ ಸಂಕನೂರು ಗ್ರಾಪಂಗೆ ಒಟ್ಟು 11 ಜನ ಸದಸ್ಯರು ಇದ್ದು. ಕಾತ್ರಾಳ, ಶಿರಗುಂಪಿ, ಸಂಕನೂರು ಗ್ರಾಮಗಳು ಈ ಪಂಚಾಯತಿಗೆ ಒಳಗೊಂಡಿದೆ. ಒಟ್ಟಿನಲ್ಲಿ ಮಾ. 15ರಿಂದ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದರಿಂದ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆಯಲ್ಲಿ ನಿರಂತರವಾಗಿದ್ದಾರೆ.

ಸಂಕನೂರಿನಲ್ಲಿ ನಡೆದ ನಾಮಪತ್ರ ಸಲ್ಲಿಕೆ ಕಾರ್ಯ ಜೋರಾಗಿ ಕಂಡು ಬಂತು. ಮಾ. 19 ಕೊನೆ ದಿನವಾಗಿದ್ದರಿಂದ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆಯಲ್ಲಿ ತೊಡಗಿದ್ದರು. ಗ್ರಾಮದಲ್ಲಿ ಬಿ.ಎಂ.ತುಗ್ಗಲದಿನ್ನಿ, ಫಾತೀಮ ಖಾದರಸಾಬ ಅಮರವತಿ, ಯಲ್ಲವ್ವ ಪೂಜಾರ, ವೀರಭದ್ರಪ್ಪ ಅಂಗಡಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯಲ್ಲಿ       ಸಲ್ಲಿಸಿದರು.

ಈ ಸಂದರ್ಭದಲ್ಲಿ ಖಾಜಾಸಾಬ ಅಮರವತಿ, ಅಬ್ದುಲಸಾಬ ಖಾದರಸಾಬ, ದಸ್ತಗಿರಿಸಾಬ ಮ್ಯಾಗೇರಿ, ಮರ್ತುಜಾಸಾಬ ಇಟಗಿ, ಖಾಜಾಮೈನುದ್ದೀನ ಅಮರವತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸುದ್ದಿ ಓದಿ