ರಾಮದುರ್ಗ

ಗ್ರಾಪಂ ನೌಕರರ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಗ್ರಾಪಂ ನೌಕರರ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ರಾಮದುರ್ಗ 25: ಗ್ರಾಮ ಪಂಚಾಯತಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 07-08 ತಿಂಗಳುಗಳಿಂದ ವೇತನ ಇಲ್ಲದೇ ಪರದಾಡುತ್ತಿದ್ದಾರೆ. ಸರಕಾರ 15 ನೇ ಹಣಕಾಸಿನ ಮೊತ್ತದಲ್ಲಿ ಶೇ. 25 ರಷ್ಟು ನೀರು ನಿರ್ವಹಣೆ, ಶೇ. 25 ರಷ್ಟು ಮೊತ್ತವನ್ನು ನೈರ್ಮಲ್ಲಿಕರಣಕ್ಕೆ ತೆಗೆದು ಆ ಮೊತ್ತದಲ್ಲಿ ವಾಟರ್ ಮನ್ ಹಾಗೂ ಸ್ವಚ್ಚತಾಗಾರರಿಗೆ ವೇತನ ನೀಡಬೇಕೆಂದು ಹಾಗೂ ಪಂಚಾಯತ ಸಂಪನ್ಮೂಲದಿಂದ ಬಿಲ್ ಕಲೆಕ್ಟರ್‌ಗಳಿಗೆ ವೇತನ ನೀಡಬೇಕೆಂದು ಆದೇಶವಾಗಿದ್ದು ಕೆಳಹಂತದಲ್ಲಿ ಆದೇಶ ಜಾರಿಯಾಗದೇ ಸಿಬ್ಬಂದಿಗಳು ವೇತನ ಇಲ್ಲದೆ ತೊಂದರೆಯಲ್ಲಿದ್ದಾರೆ.  

ಈಗ ಬಿಡುಗಡೆಯಾಗಿರುವ 15 ನೇ ಹಣಕಾಸಿನ ಮೊತ್ತದಲ್ಲಿ  ಆದರೂ ಸಿಬ್ಬಂದಿಗಳಿಗೆ ವೇತನ ನೀಡಬೇಕು. ಪಂಚಾಯತ ಸಿಬ್ಬಂದಿಗಳಿಗೆ ಕೋವಿಡ್ ವಾರಿಯರ‌್ಸ ಎಂದು ಘೊಷಿಸಬೇಕು. ಕೋವಿಡ್ ತಗುಲಿದರೆ ಆಸ್ಪತ್ರೆ ವೆಚ್ಚ ಪಂಚಾಯತಿಯವರೆ ಭರಿಸಬೇಕು. ಕೋವಿಡ್ ಕೆಲಸಕ್ಕೆ ಹೋಗುವ ಸಿಬ್ಬಂದಿಗಳಿಗೆ ಸುರಕ್ಷಾ ಸಾಧನಗಳನ್ನು ನೀಡಬೇಕು. 

ಎಲ್ಲಾ ಸಿಬ್ಬಂದಿಗಳಿಗೆ ವಿಮೆಗೆ ಒಳಪಡಿಸಬೇಕು ಮತ್ತು ಇತ್ತೀಚೆಗೆ (04/03/2021) ಡಾಟಾ ಎಂಟ್ರಿ ಆಪರೇಟರಗಳಿಗೆ ವೇತನಕ್ಕೆ ಬಿಡುಗಡೆಯಾದ ಅನುದಾನವು ಜಿಲ್ಲೆಯಲ್ಲಿ 102 ಗ್ರಾಮ ಪಂಚಾಯತಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಕೂಡಲೇ ಕ್ರಮವಹಿಸಬೇಕೆಂದು ಈ ಎಲ್ಲಾ ಬೇಡಿಕೆಗಳಿಗಾಗಿ ಒತ್ತಾಯಿಸಿ ಮೇ. 27ರಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳ ಮುಂದೆ ಕೆಲಸಗಳನ್ನು ಬಂದ ಮಾಡಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಜಿಲ್ಲಾ ಅಧ್ಯಕ್ಷ ವ್ಹಿ.ಪಿ. ಕುಲಕರ್ಣಿ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೆಖಾನ ಮಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಾರೆ. 


ಸುದ್ದಿ ಓದಿ