ಮಹಲಿಂಗಪುರ

ಕಟ್ಟಡ ಕಾರ್ಮಿಕರು ಒಗ್ಗಟ್ಟಾದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು: ಟಿರ್ಕಿ

ಕಟ್ಟಡ ಕಾರ್ಮಿಕರು ಒಗ್ಗಟ್ಟಾದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು:  ಟಿರ್ಕಿ
ಮಹಾಲಿಂಗಪುರದ ಸಾಧುನಗುಡಿ ಸಭಾಭವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ

ಮಹಾಲಿಂಗಪುರ 18 : ಪಟ್ಟಣದ ಕಟ್ಟಡ ಕಾರ್ಮಿಕರು ಒಗ್ಗಟ್ಟಾದರೆ ಮಾತ್ರ ಸರ್ಕಾರದ ಸಕಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ರಾಜ್ಯ ನೇಕಾರ ಸೇವಾಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ ಹೇಳಿದರು.

ಶುಕ್ರವಾರ ಪಟ್ಟಣದ ಸಾಧುನಗುಡಿ ಸಭಾಭವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿ ಅಂಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ‘ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಕಟ್ಟಡ ಅಥವಾ ಇತರ ವರ್ಗದ ಕಾರ್ಮಿಕರು ದೇಶದ ಗೌರವಯುತ ಕೆಲಸಗಾರರಾಗಿದ್ದು ಅವರನ್ನು ಸದಾ ಗೌರವದಿಂದ ಕಾಣಬೇಕು.ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಪ್ರತಿವರ್ಷ ಕಾರ್ಮಿಕ ಇಲಾಖೆ ಸಾಕಷ್ಟು ಯೋಜನೆಗಳನ್ನು ತರುತ್ತಿದೆ. ಕಾರ್ಮಿಕರು ಸಂಘಟನೆಗಳ ಮೂಲಕ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಕಾರ್ಮಿಕರು ದೇಶದಲ್ಲಿ ಶೇ 80 ರಿಂದ 85 ರಷ್ಟು ಇರುವುದರಿಂದ ಸರ್ಕಾರಗಳು ಇವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಭದ್ರತೆಗೆ ಸಾಮಾಜಿಕ ಬೆಳವಣಿಗೆಗೆ ಮುಂದಾಗಬೇಕಿದೆ, ರಾಜ್ಯದ ಕಾರ್ಮಿಕ ಕಲ್ಯಾಣ ನಿಧಿಯಲ್ಲಿ 13 ಸಾವಿರ ಕೋಟಿಗಳಷ್ಟು ಹಣ ಸಂಗ್ರಹವಿದ್ದು ಅದರಲ್ಲಿ ರಾಜ್ಯದ ಕಟ್ಟಡ ಕಾರ್ಮಿಕರ ಸೌಲಭ್ಯಗಳಿಗೆ ವಾರ್ಷಿಕ ಕೇವಲ 300 ರಿಂದ 400 ಕೋಟಿಗಳಷ್ಟು ಮಾತ್ರ ಖರ್ಚಾಗುತ್ತಿದ್ದು, ಸರ್ಕಾರಗಳು ಮುತುವರ್ಜಿ ವಹಿಸಿ ಇಲಾಖೆಯ ಮೂಲಕ ಪ್ರತಿಯೊಬ್ಬ ಕಟ್ಟಕಡೆಯ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ತಲುಪಿಸಬೇಕಾಗಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಬಂಡಿವಡ್ಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಯಾವುದೇ ಸ್ವಹಿತಾಸಕ್ತಿಗಾಗಿರದೆ ಕಾರ್ಮಿಕರಿಗಾಗಿ ಕೆಲಸ ಮಾಡುತ್ತಿದೆ ಇದರಲ್ಲಿ ಎರಡು ಮಾತಿಲ್ಲ. ಇನ್ನು ಕಾರ್ಮಿಕರಲ್ಲದವರೂ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ನಿಜವಾದ ಕಾರ್ಮಿಕರಿಗೆ ಸೌಲಭ್ಯಗಳು ಸಿಗುವಂತಾಗಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. 

ದೇಶದ ಹೆಮ್ಮೆಯ ಮಹಾ ಪುರುಷರಾದ ಎಂ.ವಿಶ್ವೇಶ್ವರಯ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

 ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸುರಕ್ಷಾ ಕಿಟ್‍ಗಳನ್ನು ಕಾರ್ಮಿಕರಿಗೆ ವಿತರಿಸಲಾಯಿತು. 

ಪುರಸಭೆಯ ಅಭಿಯಂತರ ಡಿ.ಬಿ.ಪಠಾಣ, ಪತ್ರಕರ್ತರಾದ ಮಹೇಶ ಆರಿ,ಮಹೇಶ ಮನ್ನಯ್ಯನಮಠ, ಎಂಜಿನಿಯರ್ ಬಸವರಾಜ ಗಾಣಿಗೇರ, ಬಂದು ಪಕಾಲಿ, ಹುಚ್ಚೇಶ ವಡ್ಡರ, ಉದ್ದಪ್ಪ ಚನ್ನದಾಸರ, ಶ್ರೀಶೈಲ ದೊಡಮನಿ, ಹಮೀದಾ ಪೆಂಡಾರಿ ಇತರರು ಇದ್ದರು.

19 mಟಠಿ 02 ಠಿhoಣo


ಸುದ್ದಿ ಓದಿ