ಸರ್ಕಾರದ ಕೈ ಸಚಿವ ಸಂಪುಟದಲ್ಲಿ ಶೀಘ್ರ ಒಪ್ಪಿಗೆ ಅಧಿವೇಶನದಲ್ಲಿ ಜಾರಿಗೆ ಅಧಿಕೃತ ಮುದ್ರೆ: ಮಾಜಿ ಸಚಿವ ಆಂಜನೇಯ
ಸರ್ಕಾರದ ಕೈ ಸಚಿವ ಸಂಪುಟದಲ್ಲಿ ಶೀಘ್ರ ಒಪ್ಪಿಗೆ ಅಧಿವೇಶನದಲ್ಲಿ ಜಾರಿಗೆ ಅಧಿಕೃತ ಮುದ್ರೆ: ಮಾಜಿ ಸಚಿವ ಆಂಜನೇಯ
ಚಿತ್ರದುರ್ಗ 04 : ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯತ್ವ ಆಯೋಗಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ವರದಿ ಸಲ್ಲಿಸಿದ್ದು, ಈಮೂಲಕ ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ ಎಂದು ಮಾಜಿ ಸಚಿವಎಚ್.ಆಂಜನೇಯ ತಿಳಿಸಿದರು.ಬೆಂಗಳೂರಿನ ವಿಧಾನಸೌಧದ ಸಿಎಂ ಕಚೇರಿ ಕೊಠಡಿಯಲ್ಲಿ ವರದಿ ಸಲ್ಲಿಕೆ ಬಳಿಕನ್ಯಾ.ನಾಗಮೋಹನ್ ದಾಸ್ ಅವರನ್ನು ಅಭಿನಂದಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯಅವರೊಂದಿಗೆ ಚರ್ಚಿಸಿದ ವೇಳೆ ಮಾತನಾಡಿದರು.ಒಳಮೀಸಲಾತಿ ಜಾರಿಗೆ ಇದ್ದ ಅಡ್ಡಿ ಆತಂಕಗಳನ್ನು ಆಗಸ್ಟ್ 1, 2024ರ ಸುಪ್ರೀಂಕೋರ್ಟ್ ತೆರೆ ಎಳೆದಿತ್ತು, ಬಳಿಕ ರಾಜ್ಯದಲ್ಲಿ ಆದಿದ್ರಾವಿಡ, ಆದಿಆಂಧ್ರ, ಆದಿಕರ್ನಾಟಕಹೆಸರಲ್ಲಿ ಮಾದಿಗ, ಛಲವಾದಿಗಳು ಗುರುತಿಸಿಕೊಂಡಿದ್ದಕ್ಕೆ ನಾಗಮೋಹನ್ ದಾಸ್‌ಆಯೋಗ ಜಾತಿಗಣತಿ ಸಮೀಕ್ಷೆ ಮೂಲಕ ತೆರೆ ಎಳೆದಿದೆ. ಅತ್ಯಂತ ವೈಜ್ಞಾನಿಕವಾಗಿವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವಿಳಂಬ ಮಾಡದೆ ಸಲ್ಲಿಸಿರುವುದುಶ್ಲಾಘನೀಯ ಎಂದರು.ವರದಿ ಕೈ ಸೇರಿದ 20 ದಿನದೊಳಗೆ ಜಾರಿಗೊಳಿಸುವುದಾಗಿ ಸಮಾಜ ಕಲ್ಯಾಣ ಸಚಿವಎಚ್.ಸಿ.ಮಹದೇವಪ್ಪ, ಮುಖ್ಯವಾಗಿ ನೀವು ಬೇಡ ಎಂದು ಹೇಳಿದರೂ ನಾವುಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ದ. ಈ ಮೂಲಕ ಎಲ್ಲ ಸಮುದಾಯಗಳಿಗೂಸಾಮಾಜಿಕ ನ್ಯಾಯ ಕೊಡಲಾಗುವುದೆಂಬ ಸಿದ್ದರಾಮಯ್ಯ ಮಾತು ಪರಿಶಿಷ್ಟಗುಂಪಿನಲ್ಲಿರುವ 101 ಜಾತಿಗಳಲ್ಲಿ ನಂಬಿಕೆ ಹೆಚ್ಚಿಸಿದೆ. ಈಗ ವರದಿ ಸರ್ಕಾರಕ್ಕೆಸಲ್ಲಿಕೆ ಆಗಿರುವುದು ಅತ್ಯಂತ ಅತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.ಈ ತಿಂಗಳಲ್ಲಿಯೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸುವಮೂಲಕ ಮಾದಿಗ ಸಮುದಾಯದ ಹೋರಾಟಕ್ಕೆ ನ್ಯಾಯ ಕೊಡಲಿದ್ದು, ಜೊತೆಗೆಛಲವಾದಿ, ಭೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿಸಮುದಾಯಗಳನ್ನು ವೈಜ್ಞಾನಿಕವಾಗಿ ಮುಖ್ಯವಾಹಿನಿಗೆ ತರಲು ಮುನ್ನುಡಿಬರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಯನ್ನೇಮಾಡುವುದಿಲ್ಲ, ವರದಿ ಸಲ್ಲಿಸಲು ಇನ್ನೂ ಬಹಳಷ್ಟು ವಿಳಂಬ ಮಾಡಲಾಗುತ್ತದೆಎಂಬ ಕೆಲವರ ಆರೋಪಗಳಿಗೆ ಆಯೋಗ ವರದಿ ಸಲ್ಲಿಸುವ ಮೂಲಕ ಪ್ರಥಮಉತ್ತರ ನೀಡಿದೆ. ಇನ್ನೂ ಆಗಸ್ಟ್ 7ರ ಸಚಿವ ಸಂಪುಟದಲ್ಲಿ ಚರ್ಚೆ, ಒಪ್ಪಿಗೆ ಬಳಿಕಜಾರಿಗೆ ಅಂತಿಮ ತೀಪು ಬರೆಯಲಾಗುತ್ತದೆ. ಬಳಿಕ ಅಧಿವೇಶನದಲ್ಲಿ ಚರ್ಚೆಗೆಮುಂದಿಟ್ಟು ಜಾರಿಗೆ ಅಧಿಕೃತ ಮುದ್ರೆ ಒತ್ತಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯನ ಮೇಲೆ ಅನಗತ್ಯ ಆರೋಪಮಾಡುತ್ತಿದ್ದವರ ಬಾಯಿಗೆ ಬೀಗ ಬೀಳಲಿದೆ ಎಂದರು.ಈ ಮೂಲಕ ಒಳಮೀಸಲಾತಿ ಜಾರಿಗಾಗಿ 35 ವರ್ಷ ಹೋರಾಟ ನಡೆಸಿದ, ಬೆಂಬಲಿಸಿದ ಎಲ್ಲರಾಜಕಾರಣಿಗಳಿಗೂ ಅದರಲ್ಲೂ ಪರಿಶಿಷ್ಟ ಗುಂಪಿನಲ್ಲಿನ ಎಲ್ಲ ಸಮುದಾಯಗಳಿಗೆಸಾಮಾಜಿಕ ನ್ಯಾಯ ಕಲ್ಪಿಸುವ ಸುವರ್ಣಾವಕಾಶ ಪಡೆದ ಸಿದ್ದರಾಮಯ್ಯಮತ್ತು ಸರ್ಕಾರಕ್ಕೆ ಜಾರಿಯ ಕೀರೀಟ ಸಲ್ಲಲಿದೆ ಎಂದು ಹೇಳಿದರು. *ಅಭಿನಂದನೆ:* ನಾಗಮೋಹನ್ ದಾಸ್ ಆಯೋಗಕ್ಕೆ ಅಭಿನಂದನೆ ಸಲ್ಲಿಸಿದಆಂಜನೇಯ ಅವರು, ನೀವು ಹೆಚ್ಚು ಶ್ರಮಿಸಿದ ವರದಿ ಸಲ್ಲಿಸುವ ಮೂಲಕನಮ್ಮ ಅಭಿಮಾನಕ್ಕೆ ಪಾತ್ರರಾಗಿದ್ದೀರಾ ಎಂದು ಅಭಿನಂದಿಸಿದರು. *ಮನವಿ* : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಸ್ತಲಾಘವ ಮಾಡಿ, ಮಾದಿಗಸೇರಿ ಎಲ್ಲ ನೊಂದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಸುವರ್ಣಾವಕಾಶ ತಮಗೆ ಲಭಿಸಿದೆ. ಶೀಘ್ರದಲ್ಲಿಯೇ ಜಾರಿಗೊಳಿಸುವ ಮೂಲಕಮಾದಿಗ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯಬೇಕು. ನಿಮ್ಮ ಬದ್ಧತೆಪ್ರಶ್ನಾರ್ಹವಾಗಿದೆ ಎಂದರು.