ವಿದ್ಯಾರ್ಥಿಗಳ ಉತ್ತಮ ಸಾಧನೆ
ಮಹಾಲಿಂಗಪುರ 05: ಸಮೀಪದ ಸಮೀರವಾಡಿ ಕೆ.ಜೆ.ಸೊಮೈಯಾ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ಇ)ಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕೀರ್ತಿ ನಾಡಗೌಡ (ಶೇ 94.8) ಪ್ರಥಮ ಸ್ಥಾನ, ಬಿಂದು ಮನ್ನಯ್ಯನವರಮಠ (ಶೇ 94.6) ಹಾಗೂ ನೇಹಾ ಗೋಲಪ್ಪನವರ (ಶೇ 94.6) ದ್ವಿತೀಯ ಸ್ಥಾನ, ಸ್ಫೂರ್ತಿ ಮದಗುಣಕಿ (ಶೇ 94.2) ತೃತೀಯ ಸ್ಥಾನ ಪಡೆದಿದ್ದಾರೆ. ಹ್ರಿತು ಚೌಧರಿ (ಶೇ 94), ಸಾಯಿಸುದೀಶ (ಶೇ 93.8), ಪೂರ್ವಿ ಅಂಗಡಿ (ಶೇ 93.6), ಕಲ್ಯಾಣ ಕಣವಿ (ಶೇ 93), ಸಂಜೀವಗೌಡ ಪಾಟೀಲ (ಶೇ 91.4), ಸಹನಾ ಅಂಗಡಿ (ಶೇ 90.8), ಅಂಕಿತಾ ಸುರನ್ನವರ (ಶೇ 90.4), ರೋಹನ ಪಾಟೀಲ (ಶೇ 90.4) ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆ ಪ್ರಾಚಾರ್ಯ ಸಿ.ಅನೀಲಕುಮಾರ ತಿಳಿಸಿದ್ದಾರೆ.