ಚರ್ಚ್ ಆಫ್ ಸೌತ್ ಇಂಡಿಯಾ ಪ್ರಾರ್ಥನಾಲಯದಲ್ಲಿ ಗುಡ್ ಫ್ರೈಡೆ ಆಚರಣೆ
ಸಿರುಗುಪ್ಪ08: 2 ಸಾವಿರ ವರ್ಷಗಳ ಹಿಂದೆ ಯೇಸುಕ್ರಿಸ್ತ ತನ್ನ 12 ಮಂದಿ ಶಿಷ್ಯರಿಗೆ ಪಾದ ತೊಳೆದ ದಿನ ಗುರುವಾರ ಆಚರಿಸಲಾಗಿತ್ತು ಶುಭ ಶುಕ್ರವಾರ ಈ ದಿನ ಪರಸ್ಪರ ಪ್ರೀತಿ ಶಾಂತಿ ಕರುಣೆ ಕ್ಷಮೆ ಔದಾರ್ಯ ಸಾವು ನೋವು ಸಂಕಟ ಎದುರಿಸಿದ ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾ ಶಕ್ತಿ ಯೇಸು ಕ್ರಿಸ್ತ ನಮಗಾಗಿ ಪ್ರಾಣತ್ಯಾಗ ಮಾಡಿ ಲೋಕ ಪಾವನ ಗೊಳಿಸಿದ ದಿನವಾಗಿದೆ ಎಂದು ರೆವೆಂಡ್ ನವೀನ ಮೂರ್ತಿ ಅವರು ಹೇಳಿದರು. ನಗರದ ಆದೋನಿ ರಸ್ತೆ ಸಿಂಧನೂರು ಬೈಪಾಸ್ ದಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ ಸಿಎಸ್ಐ ಪ್ರಾರ್ಥನಾಲಯ ಚರ್ಚ್ ಪುನರುತ್ಥಾನಲಯದಲ್ಲಿ ಕ್ರೈಸ್ತ ಸಮುದಾಯದ ಪವಿತ್ರ ದಿನ ಶುಭ ಶುಕ್ರವಾರ ಗುಡ್ ಫ್ರೈಡೇ ಆಚರಣೆಯಲ್ಲಿ ಅವರು ಮಾತನಾಡಿ ಈ ವೇಳೆ ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಮಾನವರ ಒಳತಿಗಾಗಿ ಉಳಿದ ಅತ್ಯಮೂಲ್ಯ 7ಮಾತುಗಳ ಉಪವಾಸ ಧ್ಯಾನ ಪ್ರಾರ್ಥನೆ ಮಾಡಿಸಿದ ಅವರು ನೆರೆದಿದ್ದ ನೂರಾರು ಏಸು ಭಕ್ತರಿಗೆ ಗುಡ್ ಫ್ರೈಡೇ ಸಂದೇಶ ತಿಳಿಸಿ ಆಶೀರ್ವದಿಸಿದರು ಈ ಸಂದರ್ಭದಲ್ಲಿ ಕವಿತಾ ಮೂರ್ತಿ ಚರ್ಚ್ ನ ಪ್ರಮುಖರಾದ ರವಿಕುಮಾರ್,ಆನಂದ ಕುಂದರಗಿ,ಮನೋಹರ್ ಜೋಸೆಫ್,ಸುನಿಲ್ ಕುಮಾರ್,ಅನ್ನಮ್ಮ ಸುದೀರ್,ಹೆಲೇನ್ ದಾ ನು,ಅನಿತಾ ಶಂಕರ್,ಪ್ರವೀಣ್ ಮೂರ್ತಿ ಅವರು ಮಾತನಾಡಿದರು.