ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 40.33 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ : ಖಾನಾಪೂರ ತಾಲ್ಲೂಕಿನಲ್ಲಿ ಘಟನೆ

ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 40.33 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ : ಖಾನಾಪೂರ ತಾಲ್ಲೂಕಿನಲ್ಲಿ ಘಟನೆ

ಬೆಳಗಾವಿ : ಯಾವದೇ ದಾಖಲೆಗಳು ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಿಲ್ಲೆಯ ನಂದಗಡ ಪೋಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಸಾಗಾಟಕ್ಕೆ ಬಳಸಲಾದ ಕಾರನ್ನು ವಶಕ್ಕೆ ಪಡೆದಿದ್ದಾರೆ. 

   ಜಿಲ್ಲೆಯ ಖಾನಾಪುರ ಕ್ಷೇತ್ರದಲ್ಲಿ ಮಂಗಳವಾರ 40.33 ಲಕ್ಷ ರೂ. ನಂದಗಡ ಪಿಎಸ್ ವ್ಯಾಪ್ತಿಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದ್ದು, 98 ಕೆಪಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

  ಈ ಕಾರಿನಲ್ಲಿ 21,25,304 ಮೌಲ್ಯದ 395.7 ಗ್ರಾಂ ಚಿನ್ನಾಭರಣಗಳು ಹಾಗೂ ರೂ. 19,08,420 ಮೌಲ್ಯದ 28.065 ಕೆಜಿ ಬೆಳ್ಳಿ ಆಭರಣಗಳು ಮತ್ತು 13 ಲಕ್ಷ ಮೌಲ್ಯದ ಕಾರ್ ವರ್ಹ್ ಹೀಗೆ ಚಿನ್ನಾಭರಣ ಹಾಗೂ ಕಾರು ಸೇರಿದಂತೆ ಒಟ್ಟುರೂ 53,33,724 ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.

   ಹಳಿಯಾಳದಿಂದ ಜಿಲ್ಲೆಯ ಕಕ್ಕೇರಿಗೆ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಗೆ  ಆಭರಣಗಳನ್ನು ಬಿಲ್ ಇಲ್ಲದೆ ಸಾಗಿಸಲಾಗುತ್ತಿತ್ತು ಈ ಸಂದರ್ಭದಲ್ಲಿ ನಂದಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುದ್ದಿ ಓದಿ