ಗೋಕಾಕ ಪೊಲೀಸರ ಕಾರ್ಯಾಚರಣೆ : ಓರ್ವ ಮನೆಗಳ್ಳತನದ ಖದೀಮನ ಬಂಧನ, 3.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಗೋಕಾಕ ಪೊಲೀಸರ ಕಾರ್ಯಾಚರಣೆ : ಓರ್ವ ಮನೆಗಳ್ಳತನದ ಖದೀಮನ ಬಂಧನ, 3.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬೆಳಗಾವಿ, ಆ, 27 ; ಗೋಕಾಕ ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಖೇಡ್ಡಾಗೆ ಬೀಳಿಸುವಲ್ಲಿ ಗೋಕಾಕ ಶಹರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 3.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

       ಕಳೆದ ಕೆಲವು ತಿಂಗಳುಗಳಿಂದ ಮನೆಗಳ್ಳತನ ಆಗುತ್ತಿರುವ ಬಗ್ಗೆ ದೂರುಗಳು ದಾಖಾಲಾಗುತ್ತಿದ್ದವು. ಈ ಕಳ್ಳತನ ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರ ಮಾರ್ಗದಲ್ಲಿ ಗೋಕಾಕ ಡಿಎಸ್ ಮನೋಜಕುಮಾರ ನಾಯಿಕ ಅವರು ಒಂದು ಪೊಲೀಸ ತಂಡವನ್ನು ರಚಿಸಿದ್ದರು. 

        ಈ ತಂಡವು ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ 44 ಗ್ರಾಂ ಚಿನ್ನ ಹಾಗೂ 1 ಕೆಜಿ 100 ಗ್ರಾಂ ಬೆಳ್ಳಿ ಹೀಗೆ ಒಟ್ಟು 3.5 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ಮು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಗೋಕಾಕ ವೃತ್ತದ ಸಿಪಿಐ ಗೋಪಾಲ ರಾಠೋಡ ಅವರ ನೇತೃತ್ವದಲ್ಲಿ ಮತ್ತು ಗೋಕಾಕ ಶಹರ ಠಾಣೆಯ ಪಿ.ಎಸ್.ಐ  ಎಮ್.ಡಿ.ಘೋರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಬಿ.ಎ ನೇರಲೆ, ಸುರೇಶ ಈರಗಾರ, ಮಲ್ಲಪ್ಪ ಗಿಡಗಿರಿ, ಸಚೀನ ಹೊಳೆಪ್ಪಗೋಳ, ವಿಠಲ ನಾಯಕ ರಮೇಶ ಮುರನಾಳೆ, ಪ್ರವೀಣ ಹೆಬ್ಬಾಳ ಭಾಗಿಯಾಗಿದ್ದರು. 

      ಸದರಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ತಂಡದ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ  ಸಂಜೀವ ಪಾಟೀಲ ಶ್ಲಾಘಿಸಿದ್ದಾರೆ.

ಸುದ್ದಿ ಓದಿ