ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ : ತಜ್ಞರಾದ ಡಾ.ಆನಂದ
ಲೋಕದರ್ಶನ ವರದಿ
ಹೂವಿನಹಡಗಲಿ 11: ಸಂಸ್ಕಾರವಿಲ್ಲದ ಬದುಕಿಗೆ ಭವಿಷ್ಯವಿಲ್ಲ. ಭವಿಷ್ಯವಿದ್ದರೂ ಅರ್ಥವಿಲ್ಲ ಎಂದು ಮಕ್ಕಳ ತಜ್ಞರಾದ ಡಾ.ಆನಂದ ಮಾತನಾಡಿದರು. ತಾಲ್ಲೂಕಿನ ಹೊಳಗುಂದಿ ಪರಿವರ್ತನಾ ಸೇವಾ ಸಮಿತಿ ಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಎಸ್ ಎಸ್ ಎಲ್,ಸಿ ಮತ್ತು ಗ್ರಾಮದ ನಿವೃತ್ತಿ ಯ ಹೊಂದಿದ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ಜೀವನ ಶೈಲಿಯೂ ಬದಲಾಗಿದೆ. ಆದರೆ, ನೈತಿಕ ಮೌಲ್ಯಗಳು ಅಧಃಪತನವಾಗಿರುವುದು ದುರದೃಷ್ಟಕರ. ಮಕ್ಕಳು ಭವಿಷ್ಯ ರೂಪಿಸಲು ಪಾಲಕರು ಒತ್ತಡ ಹಾಕದೇ ಅವರ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಕೂಡ್ಲಿಗಿ ಶಿಕ್ಷಕ ಬಿ.ಬಿ.ಶಿವಾನಂದ ಮಾತನಾಡಿ ಶಿಕ್ಷಕರು, ಪಾಲಕರು ಮಕ್ಕಳಿಗೆ ನಾಗರಿಕ ಸಂಸ್ಕಾರ ನೀಡಿ ಅವರನ್ನು ಹೃದಯವಂತರನ್ನಾಗಿ ರೂಪಿಸಬೇಕು.
ಶಾಲಾಭಿಮಾನ, ಗುರು ಹಿರಿಯರ ಬಗ್ಗೆ ಗೌರ ಭಾವನೆ ಮೂಡುವಂತೆ ಸಂಸ್ಕಾರಯುತ ಶಿಕ್ಷಣ ನೀಡಿ ಎಂದು ಹೇಳಿದರು. ಅದ್ಯಕ್ಷೆ ತೆ ವಹಿಸಿದ್ದ ಬಳ್ಳಾರಿ ಸರಳ ದೇವಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎ.ಎಂ.ಪಿ.ವೀರೇಶ ಮಾತನಾಡಿ ಸಮಾಜ ಮುಖಿ ಕೆಲಸ ಮತ್ತು ಮಕ್ಕಳ ಪ್ರೋತ್ಸಾಹಿಸುವ ಈ ಕಾರ್ಯಕ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಿತಿಯ ಆರಿ್ಬ.ಗುರುಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಸಮಿತಿಯ ಸದಸ್ಯರಾದ ಹೆಚ್. ಕರಿಬಸಪ್ಪ, ಎಂ. ಲೋಕೇಶ, ನವೀನಕುಮಾರ, ಕೊಟ್ರೇಶ ಹಾವನೂರು, ರಾಜು ಪಾಟೀಲ್, ಸಂಗಪ್ಪ ಹಾವನೂರು, ಕೊಟ್ರೇಶ್.ಬಿ. ಹನುಮಂತಪ್ಪ, ಯೋಗೀಶ್ ಇದ್ದರು. ಪ್ರಾರಂಭದಲ್ಲಿ ಕು. ಮುದೇಗೌಡ್ರ ವರ್ಷ ಪ್ರಾರ್ಥನಾ ನೃತ್ಯ ಗಮನ ಸೆಳೆದರು. ಎ.ಎಂ.ಪಿ.ಸಂದೀಪ್ ಸ್ವಾಗತಿಸಿದರು. ಶೇಖರ್ ಹೂಗಾರ್ ವಂದಿಸಿದರು. ಹೆಚ್.ಗುರುಬಸವರಾಜ ಮತ್ತು ಟಿ.ಜಗದೀಶ ನಿರ್ವಹಿಸಿದರು.