ಗಂಗಾವತಿ : “ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆ ”
ಗಂಗಾವತಿ 17: ತಾಲ್ಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿಯವರ
ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನೆಕ್ಕಂಟಿ ಆದರ್ಶ ಅವರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಮಾಲಾರೆ್ಣಯನ್ನು ಮಾಡುವ
ಮೂಲಕ ಪೂಜೆಯನ್ನು ನೆರವೇರಿಸಿದರು. ತದನಂತರದಲ್ಲಿ ಮಾತನಾಡಿದ ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಶ್ರೀಮತಿ ಕೃಷ್ಣವೇಣಿ ಎಸ್, ಅವರು ಶಾಲೆಯ ವಿದ್ಯಾರ್ಥಿಗಳಿಗೆ ಮಹರ್ಷಿ ವಾಲ್ಮೀಕಿಯವರ ಹಿನ್ನೆಲೆ, ವೃತ್ತಿ, ವಾಲ್ಮೀಕಿಯ ವರಿಗೆ ನಾರದಮುನಿಗಳಿಂದ ದೊರೆತ ಉಪದೇಶಗಳನ್ನು ತಿಳಿಸಿ ರಾಮಾಯಣದಿಂದ ನಾವು ಅಳವಡಿಸಿಕೊಳ್ಳಬಹುದಾದ ಜೀವನ ಮೌಲ್ಯಗಳನ್ನು ತಿಳಿಸಿದರು. 9ನೆಯ ತರಗತಿಯ ವಿದ್ಯಾರ್ಥಿಯಾದ ಅರ್ಿತಾ, ರತ್ನಾಕರ ವಾಲ್ಮೀಕಿಯಾಗಿ ಪರಿವರ್ತನೆಯಾದ ರೀತಿ, ರಾಮಾಯಣ ಮಹಾಕಾವ್ಯದ ರಚನೆ ಹಾಗು ರಾಮಾಯಣದಲ್ಲಿರುವ ಏಳು ಕಾಂಡಗಳ ಸಂಕ್ಷಿಪ್ತ ವಿವರಣೆ, ರಾಮಾಯಣದಲ್ಲಿರುವ ಒಟ್ಟು ಶ್ಲೋಕಗಳ ಕುರಿತು ಭಾಷಣ ಮಾಡಿದಳು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಜೆ ಪುಷ್ಪಲತಾ, ಶಾಲೆಯ ಪಿ.ಆರ್.ಎಮ್ ನಿಂಗಪ್ಪ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.