ಎಲಬುರ್ಗ

ಪಟ್ಟಣದಲ್ಲಿ ಪಿಓಪಿ ಗಣೇಶ ಮೂರ್ತಿ ಸ್ಥಾಪಿಸದೆ ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಿ: ಸಿಪಿಐ ನಾಗರೆಡ್ಡಿ

ಪಟ್ಟಣದಲ್ಲಿ ಪಿಓಪಿ ಗಣೇಶ ಮೂರ್ತಿ ಸ್ಥಾಪಿಸದೆ ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಿ: ಸಿಪಿಐ ನಾಗರೆಡ್ಡಿ

ಯಲಬುರ್ಗಾ 08: ಕೋವಿಡ್-19 ಮೂರನೆಯ ಅಲೆ ಭೀತಿಯಿಂದ ಈ ಬಾರಿ ಗಣೇಶೋತ್ಸವ ಆಚರಣೆಯನ್ನು ತಾಲೂಕಿನ ಜನತೆ ತಮ್ಮ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಅತ್ಯಂತ ಸರಳವಾಗಿ ಆಚರಿಸಬೇಕು ಎಂದು ಸಿಪಿಐ ಎಂ.ನಾಗರೆಡ್ಡಿ ಹೇಳಿದರು.

ಪಟ್ಟಣದ ಪೋಲೀಸ್ ಠಾಣಿಯಲ್ಲಿ ಗಣೇಶೋತ್ಸವದ ನಿಮತ್ತ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣೇಶ ಮಹಾಮಂಡಳಗಳು ಮತ್ತು ವಿವಿಧ ಧರ್ಮಗಳ ಮುಖಂಡರ ಸಮ್ಮುಖದಲ್ಲಿ ನಡೆಸಿದ ಗಣೇಶ ಚತುರ್ಥಿಯ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ. ಮಾತನಾಡಿದರು, ಕೊವೀಡ್-19 ನಿಯಮಗಳನ್ನು ಪಾಲನೆ ಮಾಡಲು ಘನ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಎಲ್ಲರು ಕಡ್ಡಾಯವಾಗಿ ಪಾಲನೆ ಮಾಡಬೇಕು, ಗಣೇಶ ಸ್ಥಾಪನೆ ಮತ್ತು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಸೌಹಾರ್ಧಯುತವಾಗಿ ಆಚರಿಸಬೇಕು. ಈ ಬಾರಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ, ಮರವಣೆಗೆ, ಬ್ಯಾನರ್, ಪ್ಲೆಕ್ಸ್ ಹಾಕುವುದು, ಡಿಜೆ ಹಚ್ಚುವುದು, ಮೋಜು-ಮಜಲು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪಿಓಪಿ ಗಣೇಶ ಮೂರ್ತಿ ಸ್ಥಾಪಿಸದೆ ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಬೇಕೆಂದು ಸಿಪಿಐ ಎಂ.ನಾಗರೆಡ್ಡಿ ತಿಳಿಸಿದರು.

ಪಿಎಸ್‍ಐ ಶಿವುಕುಮಾರ ಮುಗ್ಗಳಿ ಮಾತನಾಡಿ, ತಾಲೂಕಿನ ಯಾವದೇ ಗ್ರಾಮದಲ್ಲಿ ಗಣೇಶ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸುವ ಮುನ್ನ ಆಯಾ ಗ್ರಾ.ಪಂಯ ಪಿಡಿಓ ಅಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ದೇವಸ್ಥಾನದಲ್ಲಿ ಒಂದೇ ಗಣೇಶನನ್ನು ಸ್ಥಾಪಿಸಬೇಕು. ನಿಯಮಗಳನ್ನು ಯಾರಾದರೂ ಉಲ್ಲಂಘಣೆ ಮಾಡಿದರೇ ಅಂತವರ ಮೇಲೆ ನಿರ್ಧಾಕ್ಷಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಕೊವೀಡ್ 19 ಸಾಂಕ್ರಾಮಿಕ ರೋಗ ಇನ್ನು ಮಾಸಿಲ್ಲ. ಈ ಬಾರಿಯ ಗಣೇಶ ಚತುರ್ಥಿಯನ್ನು ಅತೀ ಸರಳವಾಗಿ ಮನೆಯಲ್ಲಿ ಆಚರಿಸಬೇಕು. ದೇವಸ್ಥಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಅಲ್ಲಿ ಮಾಸ್ಕ ಮತ್ತು ಸ್ಯಾನಿಟೈಸರ್ ಇರಿಸುವುದು ಕಡ್ಡಾಯ, ಮೂರ್ತಿ ವಿಸರ್ಜನೆಗೆ ಪಟ್ಟಣದ ಎರಡು ಕಡೆಗೆ ಸ್ಥಳ ವ್ಯವಸ್ಥೆ ಮಾಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿ ಚಿದಂಬರ, ಪಪಂ ಮುಖ್ಯಾಧಿಕಾರಿ ಸಿ.ಬಿ.ಕುಲಕರ್ಣಿ, ಪಟ್ಟಣದ ವಿವಿಧ ಸಮಾಜದ ಮುಖಂಡರು. ಊರಿನ ಹಿರಿಯರು, ಗಣ್ಯರು ಸೇರಿ ಮತ್ತಿತರಿದ್ದರು.

ಸುದ್ದಿ ಓದಿ