ಶಾಂತಿ ಮಂತ್ರದಿಂದಲೇ ವಿಶ್ವ ಗೆದ್ದ ಗಾಂಧೀಜಿ : ಕುಂದಗೋಳ
ಕಾನಿಪ ಭವನದಲ್ಲಿ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ
ಮಹಾಲಿಂಗಪುರ : ಜಗತ್ತಿನಲ್ಲಿ ಮೊದಲು ರಾಜರುಗಳು ಏನನ್ನಾದರೂ ಗೆಲಬೇಕೆಂದೆರೆ ಯುದ್ಧ ಒಂದೇ ಅಸ್ತ್ರವಾಗಿತ್ತು ಯಾರು ಬಲಿಷ್ಠರಾಗಿರುತ್ತಾರೋ ಅವರು ಗೆಲ್ಲುತ್ತಿದ್ದರು. ಹೀಗಾಗಿ ಜಗತ್ತು ಎರಡು ವಿಶ್ವ ಯುದ್ಧಗಳನ್ನು ಕಂಡಿತು. ಆದರೆ ಗಾಂಧಿ ಯುಗ ಆರಂಭವಾದ ಮೇಲೆ ಬೇರೆ ಜಗತ್ತು ಸ್ರಷ್ಟಿಯಾಯಿತು. ಶಾಂತಿಯುತ ಹೋರಾಟದಿಂದಲೇ ಜಗತ್ತನ್ನು ಗೆಲಬಹುದು ಎಂದು ತೋರಿಸಿದ್ದು ಮಹಾತ್ಮಾ ಗಾಂಧಿ ಎಂದು ಕೆ.ಎಲ್.ಇ ಪಾಲೀಟೇಕ್ನಿಕ ಕಾಲೇಜು ಪ್ರಾಚಾರ್ಯ ಎಸ್.ಐ ಕುಂದಗೋಳ ಹೇಳಿದರು.
ರಾಣಿ ಚನ್ನಮ್ಮ ಸರ್ಕಲ ಹತ್ತಿರ ಪುರಸಭೆ ಮಳಿಗೆಯಲ್ಲಿ ಇರುವ ಪತ್ರಿಕಾ ಭವನದಲ್ಲಿ ನಡೆದ ಗಾಂಧೀಜಿ ಅವರ 154 ನೇ ಹಾಗೂ ಲಾಲಬಹದ್ದೂರ ಶಾಸ್ತ್ರೀಜಿ ಆವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ 1915 ರಲ್ಲಿ ದ ಆಪ್ರಿಕಾದಿಂದ ಭಾರತಕ್ಕೆ ಬಂದು ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ, ಕ್ವೀಟ್ ಇಂಡಿಯಾ ಚಳುವಳಿಯ ಮೂಲಕ ಭಾರತದಲ್ಲಿ ಬಹು ದೊಡ್ಡ ಬದಲಾವಣೆ ತಂದು ಬ್ರಿಟಿಷ್ರ ಮೇಲೆ ಬಹು ದೊಡ್ಡ ಪ್ರಭಾವ ಬೀರಿ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾಪುರುಷರಾದರು ಗಾಂಧಿ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಪತ್ರಕರ್ತರಾದ ಜಯರಾಮ ಶೆಟ್ಟಿ ಮಾತನಾಡಿ ಗಾಂಧೀಜಿ ಅವರಿಗೆ ಒಬ್ಬ ರೈತನ ಬಡತನ ನೋಡಿ ಮನ ಪರಿವರ್ತನೆಯಾಗಿ ಈ ದೇಶದಲ್ಲಿ ಪ್ರತಿಯೊಬ್ಬರೂ ಮೈ ತುಂಬಾ ಬಟ್ಟೆ ಮತ್ತು ಹೊಟೇ ತುಂಬಾ ಎರಡು ಊಟ ಸಿಕ್ಕಾಗಲೇ ನಿಜವಾದ ಸ್ವಾತಂತ್ರ ಎಂದು ತಿಳಿದು ಮೈಮೇಲಿನ ಬಟ್ಟೆ ತೆಗೆದು ಅರೆ ಬೆತ್ತಲೆಯಾಗಿ ಹೋರಾಟಕ್ಕೆ ಡುಮಿಕಿದರು ಎಂದು ಹೇಳಿದರು.
ನಂತರ ಮಾತನಾಡಿದ ನೇಕಾರ ಮುಖಂಡರಾದ ಮನೋಹರ ಶಿರೋಳ ದೇಶದ ಎರಡನೆಯ ಪ್ರಧಾನ ಮಂತ್ರಿ ಲಾಲಬಹಾದ್ದೂರ ಶಾಸ್ತ್ರೀ ದೇಶದ ಅತ್ಯಂತ ಪ್ರಾಮಾಣಿಕ ಮತ್ತು ಧೀಮಂತ ನಾಯಕ ಕಡಿಮೆ ಅವಧಿಯಲ್ಲಿ ಅವರು ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಜಯ ತಂದು ಕೊಟ್ಟರು. ಯುದ್ಧ ಮುಕ್ತಾಯ ಒಪ್ಪಂದಕ್ಕೆ ಸಹಿ ಹಾಕಲು ರಷ್ಯಾ ದೇಶದ ತಾಸ್ಕ್ಯೆಂಟಗೆ ಹೋದಾಗ ದುರಂತ ಸಾವು ಕಂಡರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಜಿ ಎಸ್ ಗೊಂಬಿ. ರಾಜ್ಯ ಹಸಿರು ಸೇನೆ ಸಂಚಾಲಕರು ರೈತ ಮುಖಂಡರಾದ ಗಂಗಾಧರ ಮೇಟಿ. ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷರಾದ ಸಂಗಪ್ಪ ಹಲ್ಲಿ ಮಾತನಾಡಿದರು. ಮಹಾಲಿಂಗಪ್ಪ ಲಾತುರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮುಖಂಡ ಶಿವಲಿಂಗ ಟಿರ್ಕಿ, ಶಂಭು ಬಡಿಗೇರ, ಮಹಾದೇವ ಪುಕಾಳೆ, ಬಂದು ಪಕಾಲಿ, ಡಾ ಮಹಾದೇವ ಕದ್ದಿಮನಿ, ಸಿದ್ದು ಶಿರೋಳ, ರಫಿಕ್ ಮಾಲದಾರ, ಕಾನಿಪ ಅಧ್ಯಕ್ಷ ಮಹೇಶ ಆರಿ, ಪತ್ರಕರ್ತರಾದ ಎಸ್.ಎಸ್ ಈಶ್ವರಪ್ಪಗೋಳ, ಮಹೇಶ ಮನ್ನಯ್ಯನವರಮಠ, ಹನಮಂತ ನಾವಿ ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ಪತ್ರಕರ್ತ ಲಕ್ಷ್ಮಣ ಕಿಶೋರ ನಿರೂಪಿಸಿದರೂ ಪತ್ರಕರ್ತ ಚಂದ್ರು ಮೊರೆ ವಂದಿಸಿದರು.