ಶ್ರಾವಣ ಅಧಿಕ ಮಾಸದ ಪ್ರಯುಕ್ತ ಎಪಿಎಂಸಿ ಗಣಪತಿ ದೇವಸ್ಥಾನದಲ್ಲಿ ಘನ ಹೋಮ.
ಮಹಾಲಿಂಗಪುರ : ಶ್ರಾವಣ ಅಧಿಕ ಮಾಸದ ಪ್ರಯುಕ್ತವಾಗಿ ಸ್ಥಳೀಯ ಎಪಿಎಂಸಿ ಯಾರ್ಡ್ ಗಣಪತಿ ದೇವಸ್ಥಾನದಲ್ಲಿ ವರ್ತಕರ ಸಂಘದ ವತಿಯಿಂದ ಮಂಗಳವಾರ ಮುಂಜಾನೆ ಘನ ಹೋಮ ಪೂಜೆ ನೆರವೇರಿತು.
ಹೋಮ ಕಾರ್ಯದಲ್ಲಿ ಶ್ರೀಶೈಲ ನುಚ್ಚಿ, ವಂದನಾ ನುಚ್ಚಿ, ಶಿವಾನಂದ ಹುಬ್ಬಳ್ಳಿ, ಶಿವಲೀಲಾ ಹುಬ್ಬಳ್ಳಿ, ವಿನಯ ಚಮಕೇರಿ, ರೂಪಾ ಚಮಕೇರಿ, ಸತೀಶ್ ಸೊರಗಾವಿ, ಜಯಶ್ರೀ ಸೋರಗಾವಿ, ಸುನಿಲ ಕಿರಗಟಿಗಿ, ದೀಪಾ ಕಿರಗಟಗಿ ದಂಪತಿಗಳು ಪಾಲ್ಗೊಂಡು, ಗುರುನಾಥ ಯರಗಟ್ಟಿಕರ, ಘನಶಾಮ ಯರಗಟ್ಟಿಕರ, ಗಿರೀಶ ಆಚಾರ್ಯ ಅವರು ಗಣಪತಿ ಹೋಮ ನಡೆಸಿ ಲೋಕದ ಸಕಲ ಜೀವರಾಶಿಗಳಿಗೆ ಎಲ್ಲ ವಿಧಗಳಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂದು ವಿಘ್ನ ನಿವಾರಕನಲ್ಲಿ ಪ್ರಾರ್ಥಿಸಿದರು.
ವರ್ತಕ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಉಪಾಧ್ಯಕ್ಷ ಬಾಲಕೃಷ್ಣ ಮಾಳವದೆ ಖಜಾಂಚಿ ಬಸವರಾಜ ಭಟ್ಕುರ್ಕಿ, ಕಾರ್ಯದರ್ಶಿ ಶ್ರೀಶೈಲ ನುಚ್ಚಿ, ಸದಸ್ಯ ಸದಾಶಿವ ಕುಂದರಗಿ ಮತ್ತು ವಿನಯ ಗೊಂದಿ, ಬಸವರಾಜ ನಿಂಬರಗಿ, ಮಹಾಂತೇಶ ಘಟ್ನಟ್ಟಿ, ವಿಜಯ ಬಾಡನವರ, ಬಸವರಾಜ ಪಾಶ್ಚಾಪೂರ, ಗೋಪಾಲ, ಎಂ ಜೆ. ಪಟೇಲ, ಜೆ ಕೆ, ಉಲ್ಲಾಸ ಪಟ್ಟಣಶೆಟ್ಟಿ, ಶಂಕರ ಬಂಡಿಗಣಿ, ರವಿ ಶಿರೋಳ, ಚಂದ್ರು ಮಿರ್ಜಿ, ಶಂಕರ್ ಬಂಡಿಗಣಿ, ಆನಂದ ಮಿಜರ್ಿ, ಶ್ರೀಶೈಲ ಜಮಖಂಡಿ, ಮಹಾಲಿಂಗಪ್ಪ ಜಿಟ್ಟಿ, ರವಿ ಶಿರೋಳ, ಗಂಗಯ್ಯ ಮಠಪತಿ, ಲಕ್ಷ್ಮಣ ಮೂಡಲಗಿ ಮುಂತಾದವರಿದ್ದರು.