ಮಹಲಿಂಗಪುರ

ಫೆಬ್ರವರಿ 23 ಹಾಗೂ 24 ರಿಂದ ನಮ್ಮೂರ ಹೆಮ್ಮೆ ತೆರಬಂಡಿ ಮತ್ತೊಮ್ಮೆ ಉತ್ಸವ

ಫೆಬ್ರವರಿ 23 ಹಾಗೂ 24 ರಿಂದ ನಮ್ಮೂರ ಹೆಮ್ಮೆ ತೆರಬಂಡಿ ಮತ್ತೊಮ್ಮೆ ಉತ್ಸವ

ಮಹಾಲಿಂಗಪುರ 22: ಪಟ್ಟಣದ  ಬಸವೇಶ್ವರ ಜಾತ್ರಾ ಕಮಿಟಿ ವತಿಯಿಂದ ಫೆಬ್ರವರಿ 23 ಹಾಗೂ 24 ರಿಂದ ನಮ್ಮೂರ ಹೆಮ್ಮೆ ತೆರಬಂಡಿ ಮತ್ತೊಮ್ಮೆ ಉತ್ಸವ ಕಾರ್ಯಕ್ರಮದ ಪ್ರಯುಕ್ತ ಬೃಹತ್ ಬಹುಮಾನಗಳ ಅಂತರ್ ರಾಜ್ಯ ಪಂದ್ಯಾವಳಿ ಜರುಗಲಿದೆ ಎಂದು ಜಾತ್ರಾ ಕಮಿಟಿಯ ಅಧ್ಯಕ್ಷ ಯಲ್ಲನಗೌಡ ಪಾಟೀಲ್ ತಿಳಿಸಿದ್ದಾರೆ.  

ಜಗದ್ಗುರು ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯದಲ್ಲಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ತೆರುಬಂಡಿ ಉತ್ಸವಕ್ಕೆ ಚಾಲನೆ ನೀಡುವರು. ತಂದೆ ನಂತರ ಪುಷ್ಪಾರ್ಚನೆಯನ್ನು ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಮಾಜಿ ಸೈನಿಕ ಶ್ರೀಶೈಲ ಭಜಂತ್ರಿ ನೆರವೇರಿಸುವರು ಎಂದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ, ಅಧ್ಯಕ್ಷರು ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ವಿನಯ ಕುಲಕರ್ಣಿ, ವಿಪ ಸದಸ್ಯೆ ಶ್ರೀಮತಿ ಉಮಾಶ್ರೀ, ಅಧ್ಯಕ್ಷ ಬಿಡಿಸಿಸಿ ಬ್ಯಾಂಕ್ ಅಜಯಕುಮಾರ ಸರನಾಯಕ, ಎಸ್ ಜಿ ನಂಜಯ್ಯನಮಠ, ಮಾಜಿ ಸಚಿವ ಎಸ್ ಆರ್‌. ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮಲಘಾಣ, ಮಾಜಿ ಶಾಸಕ ಆನಂದ ನ್ಯಾಮಗೌಡ, ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬಸನಗೌಡ ಪಾಟೀಲ್, ಮಾಜಿ ಅಧ್ಯಕ್ಷೆ ಬಾಗಲಕೋಟ ಜಿಲ್ಲಾ ಪಂಚಾಯತ್ ವೀನಾ ಕಾಷಪ್ಪನ್ನವರ ಅಲ್ಲದೆ ಇನ್ನೂ ಅನೇಕ ತನು ಮನ ಧನ ಮೂಲಕ ಪರೋಕ್ಷ ಅಪರೋಕ್ಷವಾಗಿ ಸಹಕರಿಸಿದ ಮಹನೀಯರು ಉಪಸ್ಥಿತರಿರುವರು. 

ಬಹುಮಾನಗಳು : ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಎತ್ತುಗಳಿಗೆ ಪ್ರಥಮ 1ಲಕ್ಷ, ದ್ವಿತೀಯ 75ಸಾವಿರ, ತೃತೀಯ 50ಸಾವಿರ, ಚತುರ್ಥ 45ಸಾವಿರ, ಪಂಚಮ 40ಸಾವಿರ, 6ನೇಯ 35ಸಾವಿರ, 7ನೇ 30ಸಾವಿರ, 8ನೇ 28ಸಾವಿರ, 9ನೇ 26ಸಾವಿರ, 10ನೇ 24ಸಾವಿರ, 11ನೇ 22ಸಾವಿರ, 12ನೇ 20ಸಾವಿರ, 13ನೇ 18ಸಾವಿರ, 14ನೇ 16ಸಾವಿರ, 15ನೇ 15ಸಾವಿರ, 16ನೇ 14ಸಾವಿರ, 17ನೇ 13ಸಾವಿರ, 18ನೇ 12ಸಾವಿರ, 19ನೇ 11ಸಾವಿರ, 2ನೇ 10ಸಾವಿರ, 21ನೇ 9ಸಾವಿರ, 22ನೇ 8ಸಾವಿರ, 23ನೇ 7ಸಾವಿರ, 24ನೇ 6ಸಾವಿರ, 25ನೇ 5ಸಾವಿರ ಹೀಗೆ ಒಟ್ಟು ಇಪ್ಪತ್ತೈದು ನಗದು ಬಹುಮಾನಗಳ ಜೊತೆಗೆ ಪಾರಿತೋಷಕಗಳನ್ನು ನೀಡಲಾಗುತ್ತದೆ. 

ನಿಯಮಗಳು: ಈ ಸ್ಪರ್ಧೆಯು 2ನಿಮಿಷಗಳದ್ದಾಗಿದೆ. ಪಟ್ಟಣದ ಸಾಧು ಗುಡಿ ಹತ್ತಿರ ಗಟ್ಟಿ ಮೈದಾನದಲ್ಲಿ ನಡೆಸಲಾಗುವುದು.ಜರ್ಸಿ ಎತ್ತುಗಳಿಗೆ ಪ್ರವೇಶವಿಲ್ಲ. ಎತ್ತುಗಳಿಗೆ ಟಾರ್ಚ್‌ ಹಚ್ಚುವಂತಿಲ್ಲ. ಫೆಬ್ರುವರಿ 22 ರಂದು ಎಪಿಎಂಸಿ ಟೆಂಡರ್ ಹಾಲ್ ನಲ್ಲಿ ಲಾಟ್ ಹಾಕಲಾಗುತ್ತದೆ. ಇನ್ನೂ ಅನೇಕ ನಿಯಮಗಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಮಿಟಿಯ ಸದಸ್ಯರಾದ ಕೃಷ್ಣಗೌಡ ಪಾಟೀಲ್ ಮೋ -99013435522, ನಾರಾಯಣಗೌಡ ಪಾಟೀಲ್ - ಮೋ 9731097077, ಶಿವಪ್ಪ ಗಿರಡ್ಡಿ ಮೋ-9036739529, ಮಹಾಲಿಂಗಪ್ಪ ಪಾಟೀಲ್ ಮೋ- 9738775747 ಸಂದರ್ಶಿಸಿಸಲು ಈ ಮೂಲಕ ಕೋರಲಾಗಿದೆ. 


ಸುದ್ದಿ ಓದಿ