ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯವಾಗಿದೆ:ಮಹಾರುದ್ರಪ್ಪ

ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯವಾಗಿದೆ:ಮಹಾರುದ್ರಪ್ಪ

ಶಿಗ್ಗಾವಿ  17: ಸ್ವಾತಂತ್ರ್ಯ ಪೂರ್ವ ಅನೇಕ ಮಹನೀಯರ ನಿರಂತರ ಹೋರಾಟ ಮತ್ತು ತ್ಯಾಗ ಬಲಿದಾನದ ಸಂಕೇತವೇ ಸ್ವಾತಂತ್ರ್ಯವಾಗಿದೆ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹಾರುದ್ರ​‍್ಪ ಕೊಡ್ಲಿವಾಡ ಹೇಳಿದರು.  

ಪಟ್ಟಣದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ನಂಬರ 1 ರಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ವೀರ ಮರಣ ಹೊಂದಿದ ಮಹಾತ್ಮರು, ಯೋಧರನ್ನು ನಾವು ನೆನೆಯೋಣ ಹಾಗೂ ಅವರ ಮಾರ್ಗದಲ್ಲಿ ಸಾಗೋಣ ಎಂದರು.  ಮುಖ್ಯ ಅತಿಥಿ ಪುರಸಭೆ ಸದಸ್ಯ ಗೌಸಖಾನ ಮುನಶಿ ಮಾತನಾಡಿ ಇಂದಿನ ಮಕ್ಕಳಿಗೆ ನಮ್ಮ ಸ್ವಾತಂತ್ರ್ಯದ ನೈಜ ಇತಿಹಾಸವನ್ನು ಮನ ಮುಟ್ಟುವಂತೆ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರಧಾನ ಗುರುಗಳು ಎಂ. ಎಂ. ದೇವಕಿಗೌಡ್ರ, ಮುಖಂಡ ಮುನ್ನಾ ಲಕ್ಷ್ಮೇಶ್ವರ, ಸಮಿತಿ ಉಪಾಧ್ಯಕ್ಷೆ ಪವಿತ್ರಾ ಹಾವೇರಿ, ಸದಸ್ಯರಾದ ಸಂಕಪ್ಪ ಶೆಟ್ಟಪ್ಪನವರ, ಮಂಜು ಬಂಡಿವಡ್ಡರ, ಗುಲಾಮ ಸಾಬೀರ್ ಬಾಡ, ಮೆಹಬೂಬ ತಾಜಿ, ಸವಿತಾ ಭಜಂತ್ರಿ,ರೇಖಾ ಪೂಜಾರ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಸಂಕಪ್ಪ ಶೆಟ್ಟಪ್ಪನವರ,ಗುಲಾಮ ಸಾಬೀರ್ ಬಾಡ, ಮೆಹಬೂಬ ತಾಜಿ ಶಾಲೆಗೆ ದೇಣಿಗೆ ನೀಡಿದ ಗೌರವಾರ್ಥ ಸನ್ಮಾನಿಸಲಾಯಿತು. ಲವಕುಮಾರ ಟಿ ಸ್ವಾಗತಿಸಿದರು, ಸವಿತಾ ಎಂ ಬಿ ವಂದಿಸಿದರು.ಸಹ ಶಿಕ್ಷಕಿ ಎಂ ಜೆ ಶೀಲವಂತ ನಿರೂಪಿಸಿದರು. 


ಸುದ್ದಿ ಓದಿ