ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತ ಮಾಸ್ಕ್, ಸೋಪ್, ಸ್ಯಾನಿಟೈಸರ್ ವಿತರಣೆ
ರಾಮದುರ್ಗ ಸೆಪ್ಟೆಂಬರ್08: ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಸೂಕ್ತ ದಾಖಲೆಗಳೂಂದಿಗೆ ತಮ್ಮ ಹೆಸರನ್ನು ಪರುಸಭೆಯಲ್ಲಿ ನೋಂದಾಯಿಸಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ತಾಲೂಕ ಘಟಕವು ಏರ್ಪಡಿಸಿದ ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತ ಮಾಸ್ಕ, ಡಟಾಲ್ ಸೋಪ್ ಮತ್ತು ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆ ಅಡಿ ಕೇಂದ್ರ ಸರಕಾರದಿಂದಾ ರೂ. 10,000 ಸಾಲವನ್ನು ನೀಡಲಾಗುವುದು ಬೀದಿ ಬದಿ ವ್ಯಾಪಾರಿಗಳು ಇದರ ಸದುಪಯೋಗ ಪಡಿಸಿಕೊಂಡು ಆಥರ್ಿಕವಾಗಿ ಸದೃಡರಾಗಲು ಕರೆ ನೀಡಿದರು.
ಕೊರೊನಾ ರೋಗದಿಂದಾ ಬೀದಿ ಬದಿ ವ್ಯಾಪಾರಿಗಳ ಬದುಕು ದುಸ್ಥುರವಾಗಿದ್ದು ನಿಸರ್ಗಕ್ಕೆ ನಾವು ಎಲ್ಲರೂ ತಲೆಬಾಗಲೇ ಬೇಕು, ಸರಕಾರ ತಮ್ಮ ಜೊತೆ ಇದೆ ದೃತಿಗೇಡದೇ ಕಾರ್ಯಪ್ರರ್ವತ್ತರಾಗಲು ಸಲಹೆ ನೀಡಿದರು. ಕನರ್ಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ತಾಲೂಕ ಘಟಕದ ಅಧ್ಯಕ್ಷ ಹುಸೇನಬಾಷಾ ಮಹಮ್ಮದಲಿ, ಉಫಾಧ್ಯಕ್ಷ ಅಪ್ಪಣ್ಣ ಬಾಡಗಾರ, ಸದಸ್ಯರಾದ ದಾದಾಪೀರ ಕಲೈಗಾರ, ಮಹಾದೇವಿ ವರಗ್ಗಮಾರ, ಪುರಸಭೆ ಮುಖ್ಯಾಧಿಕಾರಿ ಎಸ್ ಜಿ ಅಂಬಿಗೇರ, ಸಹಾಯಕ ಅಭಿಯಂತರ ವೆಂಕಟೇಶ ಕಾಮನ್ನವರ, ಎಮ್ ಪಿ ನದಾಫ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಹಾಜರಿದ್ದರು.