ಶಾಸಕ ಯಾದವಾಡರಿಂದ ಉಚಿತ ಅಂಬುಲೆನ್ಸ ಸೇವೆ
ರಾಮದುರ್ಗ 11: ಕೊರೊನಾ ಎರಡೆನೆ ಅಲೆ ವೇಗವಾಗಿ ಹರಡುತ್ತಿದ್ದು ಸಮರ್ಥವಾಗಿ ನಿಯಂತ್ರಿಸಲು ಹಾಗೂ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಅಂಬುಲೆನ್ಸಗಳ ಸೇವೆ ಅವಶ್ಯವಿದೆ ಎಂಬುದನ್ನು ಮನಗಂಡು ಸ್ವಂತ ಖರ್ಚಿನಲ್ಲಿ ಅಂಬುಲೆನ್ಸ ಸೇವೆ ಪ್ರಾರಂಭಿಸಲಾಗಿದೆ, ಕಾರಣ ಅವಶ್ಯಕತೆಯಿದ್ದಲ್ಲಿ ತಾಲೂಕಾಸ್ಪತ್ರೆಗೆ ಕರೆ ಮಾಡಿ ಅಂಬುಲೆನ್ಸ ಸೇವೆಯ ಸೌಲಭ್ಯ ಪಡೆಯುವಂತೆ ಶಾಸಕ ಮಹಾದೇವಪ್ಪ ಯಾದವಾಡ ಸಾರ್ವಜನಿಕರಿಗೆ ಕರೆ ನೀಡಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ ಶಾಸಕರಿಂದಾ ಉಚಿತ ಅಂಬುಲೆನ್ಸ ಸೇವೆ ಹಾಗೂ 18 ವರ್ಷ ಮೆಲ್ಪಟ್ಟರಿಗೆ ಉಚಿತ ಕೊವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೊವಿಡ್ ಲಸಿಕೆಯನ್ನು 18 ವರ್ಷ ಮೆಲ್ಪಟ್ಟ ಎಲ್ಲರೂ ಹಾಕಿಸಿಕೊಂಡು ಕೋವಿಡ್ ನಿಯಂತ್ರಿಸಲು ಸಹಕಾರಿಯಾಗಿಬೇಕು, ಲಸಿಕೆಯಿಂದಾ ರೋಗ ನೀರೂಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು. ಕೋವಿಡ್ ನಿಯಂತ್ರಣದ ಕ್ರಮಗಳನ್ನು ಎಲ್ಲರೂ ಪಾಲಿಸುವಂತೆ ಗಲ್ಲಿ ಗಲ್ಲಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಯುವ ಸಮುದಾಯಕ್ಕೆ ಮನವಿ ಮಾಡಿದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣಾ ಯಾದವಾಡ ಮಾತನಾಡಿ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪಕ್ಕದ ಬದಾಮಿ ತಾಲೂಕಿನಂದಾ ಚುನಾಯಿತರಾಗಿಯು ಕೊರೊನಾ ರೋಗದಿಂದಾ ತತ್ತರಿಸುತ್ತರುವ ಸಂದರ್ಭದಲ್ಲಿಯೂ ಕ್ಷೇತ್ರಕ್ಕೆ ಭೇಟಿ ನೀಡಿ ಕ್ಷೇತ್ರದ ಜನರ ನೋವುಗಳಿಗೆ ಸ್ಪಂದಿಸುವದು ಬಿಟ್ಟು ಬೆಂಗಳೂರಿನಲ್ಲಿ ಕೂತು ಮಾತನಾಡುತ್ತಿರವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ತಹಶೀಲ್ದಾರ ಮಲ್ಲಿಕಾಜರ್ುಣ ಹೆಗ್ಗನ್ನವರ ಮಾತನಾಡಿ ಕೋವಿಡ ರೋಗ ನಿಯಂತ್ರಿಸಲು ಬೇಕಾದ ಕ್ರಮಗಳನ್ನು ತಾಲೂಕ ಆಡಳಿತ ತಗೆದುಕೊಂಡಿದೆ ಸಾರ್ವಜನಿಕರು ಆಂತಕ ಪಡುವ ಅವಶ್ಯಕತೆ ಇಲ್ಲಾ ಆದರೆ ಕೊರೊನಾ ರೋಗದ ಬಗ್ಗೆ ಜಾಗೃತಿ ಇದ್ದರೆ ಖಂಡಿತಾ ರೋಗ ನಿಯಂತ್ರಿಸಬಹುದು ಎಂದು ಹೇಳಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ ಮತ್ತು ಸ್ಯಾನಿಟೈಜರ ಬಳಕೆ ಮಾಡಿ ಸಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಸಾರ್ವಜನಿಕ ಆಸ್ಪತ್ರೆಯ ಡಾ. ನವೀನ ನಿಜಗುಲಿ, ಡಾ. ಹಂಚಿ , ಡಾ. ವರುಣ ಬೀಳಗಿ, ಪುರಸಭೆ ಅಧ್ಯಕ್ಷ ಶಂಕರ ಬನ್ನೂರ, ಉಪಾಧ್ಯಕ್ಷ ರಾಘವೆಂದ್ರ ದೊಡಮನಿ, ಸಿಪಿಐ ರವಿಕಾಂತ ವರ್ಮಾ ಹಾಗೂ ಇತರರು ಉಪಸ್ಥಿತರಿದ್ದರು.