ಮಾಜಿ ಜಿಪಂ ಸದಸ್ಯ ಬಿಜೆಪಿಗೆ ಗುಡ್ ಬೈ ಹೇಳುತ್ತಾರಂತೆ
ಯಲಬುರ್ಗಾ 16: ಬಿಜೆಪಿ ಹಿರಿಯ ಮುಖಂಡ ಹಾಗೂ ಜಿ.ಪಂ. ಮಾಜಿ ಸದಸ್ಯ ಅಡಿವೆಪ್ಪ ಭಾವಿಮನಿ ಅವರು ನಿವಾಸಕ್ಕೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು.
ತಾಲೂಕಿನ ಬಂಡಿ ಗ್ರಾಮದ ಭಾವಿಮನಿ ಅವರ ಮನೆಗೆ ಭಾನುವಾರ ಸಂಜೆ ಓಪಚಾರಿಕವಾಗಿ ಭೇಟಿ ನೀಡಿ ಎ.ಜಿ.ಭಾವಿಮನಿ ದಂಪತಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಚರ್ಚೆ ನಡೆಸಿ, ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಅಧಿಕೃತವಾಗಿ ಸೇರ್ಪಡೆಯಾಗುವಂತೆ ಆಹ್ವಾನಿಸಿದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಮತ್ತು ಎ.ಜಿ.ಭಾವಿಮನಿ ಅವರು ಆತ್ಮೀಯ ಸ್ನೇಹಿತರಾಗಿದ್ದು, ಈ ಹಿಂದೆ ಅನೇಕ ಚುನಾವಣೆಯನ್ನು ಇಬ್ಬರೂ ಒಟ್ಟಾಗಿ ಎದುರಿಸಿದ್ದಾರೆ. ಮುಂಬರುವ ಜಿ.ಪಂ., ತಾ.ಪಂ. ಇತರೆ ಚುನಾವಣೆಯ ಉದ್ದೇಶವನ್ನು ಇಟ್ಟುಕೊಂಡು ಸ್ವತಃ ರಾಯರಡ್ಡಿಯವರೇ ಭಾವಿಮನಿಯವರನ್ನ ಪಕ್ಷಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಳವಣಿಗೆ ಬಿಜೆಪಿ ವಲಯದಲ್ಲಿ ತ್ರೀವ ಆತಂಕ ಮೂಡಿಸಿದೆ.
ಹಾಲಪ್ಪ ಆಚಾರ್ ಅವರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಒಂದು ವರ್ಷದಲ್ಲಿಯೇ ಇವರಿಬ್ಬರ ಅಭಿವೃದ್ಧಿ ವಿಚಾರದಲ್ಲಿ ಮನಸ್ಥಾಪ ಉಂಟಾಗಿ ಭಾವಿಮನಿ ಅವರು ಶಾಸಕರೊಂದಿಗೆ ಅಂತರ ಕಾಪಾಡಿಕೊಂಡು ಬಂದಿದ್ದರೂ. ಬಿಜೆಪಿ ಪಕ್ಷದಲ್ಲಿ ನಾನೊಬ್ಬ ಹಿರಿಯ ಮುಖಂಡ ಹಾಗೂ ನನ್ನ ಪತ್ನಿ ಜಿ.ಪಂ. ಸದಸ್ಯರಾಗಿದ್ದರೂ ಕೂಡಾ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೈಜೋಡಿಸಲಿಲ್ಲ. ಏಕಪಕ್ಷಿ ನಿರ್ಧಾರದಿಂದ ಬೇಸತ್ತು. ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿದ್ದಾರೆ ಎಂಬ ಮಾತುಗಳು ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಭಾವಿಮನಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಯಾಗುತ್ತಿರುವುದು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಲಪ್ಪ ಆಚಾರ್ ಅವರಿಗೆ ಇದು ಬಿಗ್ ಶಾಕ್ ನೀಡಿದಂತ್ತಾಗಿದೆ.
ಇತ್ತೀಚ್ಛೆಗೆ ಜಿ.ಪಂ. ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜಶೇಖರ ಹಿಟ್ನಾಳ ಬೆಂಬಲಿಸುವ ಮೂಲಕ ಕಾಂಗ್ರೆಸ್ಗೆ ಜೈಕಾರ ಹಾಕಿದ್ದಾರೆ. ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಪರೋಕ್ಷವಾಗಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಸೇರುತ್ತಾರೆ. ಬಲವಾಗಿ ಮಾತುಗಳು ಕೇಳಿ ಬಂದಿದ್ದು ಇಂದು ಅಧಿಕೃತವಾಗಿ ಹೊರ ಬಿದ್ದಿದೆ.
ಶೀಘ್ರದಲ್ಲಿಯೇ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಯಾಗುವ ಇಂಗಿತವನ್ನು ಭಾವಿಮನಿ ವ್ಯಕ್ತಪಡಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಸಚಿವ ಹಾಲಪ್ಪ ಆಚಾರ್ ಅವರ ರಾಜಕೀಯ ನಡೆಗೆ ಅನೇಕ ಬಿಜೆಪಿ ಮುಖಂಡರು ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರುವವರ ಸಂಖ್ಯೆ ಅಧಿಕವಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.