ಅಂತರರಾಷ್ಟ್ರೀಯ

ಸುಡಾನ್ ಮಾಜಿ ಪ್ರಧಾನಿ ಸಾದಿಕ್ ಮಹ್ದಿ ನಿಧನ

ಸುಡಾನ್  ಮಾಜಿ ಪ್ರಧಾನಿ ಸಾದಿಕ್ ಮಹ್ದಿ ನಿಧನ

ಮಾಸ್ಕೋ, ನವೆಂಬರ್ 26: ಸುಡಾನ್ ಮಾಜಿ ಪ್ರಧಾನಿ  ರಾಷ್ಟ್ರೀಯ ಉಮ್ಮಾ ಪಕ್ಷದ ಮುಖ್ಯಸ್ಥ ಸಾದಿಕ್ ಮಹ್ದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ.  ಅವರಿಗೆ  84 ನೇ ವಯಸ್ಸಾಗಿತ್ತು ಎಂದು ಮಾಧ್ಯಮ ವರದಿ ಮಾಡಿದೆ.

ಕೊರೋನ ಸೋಂಕಿಗೆ  ತುತ್ತಾಗಿದ್ದ  ಅವರ  ಆರೋಗ್ಯ ಸ್ಥಿತಿ ಬುಧವಾರ ಗಮನಾರ್ಹವಾಗಿ ಹದಗೆಟ್ಟಿತು  ಎಂದು ಅಲ್-ಸುಡಾನಿ ಪತ್ರಿಕೆ  ವರದಿ ಮಾಡಿತ್ತು .ಮಾಜಿ ಪ್ರಧಾನಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಿಧನರಾಗಿದ್ದಾರೆ ಎಂದೂ  ವರದಿಯಾಗಿದೆ.ಮಹ್ದಿ 1966-1967ರಲ್ಲಿ ಮತ್ತು 1986-1989ರಲ್ಲಿ ಸುಡಾನ್ ಪ್ರಧಾನ ಮಂತ್ರಿಯಾಗಿದ್ದರು.

 

ಸುದ್ದಿ ಓದಿ