ಮಹಲಿಂಗಪುರ

ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಮನೆಗೆ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಭೇಟಿ, ಸಾಂತ್ವನ

ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಮನೆಗೆ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಭೇಟಿ, ಸಾಂತ್ವನ

ಮಹಾಲಿಂಗಪುರ10: ಹೃದಯಾಘಾತದಿಂದ ನಿಧನರಾದ ಕನ್ನಡದ ಕಬೀರ ಖ್ಯಾತೀಯ ಇಬ್ರಾಹಿಂ ಸುತಾರ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಆರ್‌.ಬಿ.ತಿಮ್ಮಾಪುರ ಭೇಟಿ ನೀಡಿ, ಸುತಾರ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. 

ಸುತಾರ ಅವರ ನಿಧನದಿಂದ ಭಾವೈಕ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದರು. ಸುತಾರ ಅವರ ಹೆಸರು ಅಜರಾಮರಗೊಳಿಸಲು ಅವರ ಕನಸಿನ ಭಾವೈಕ್ಯ ವಾಚನಾಲಯ ನಿರ್ಮಿಸಲು ಆರ್ಥಿಕ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಸದುಗೌಡ ಪಾಟೀಲ, ನ್ಯಾಯವಾದಿ ಉದಯಸಿಂಗ್ ಫಡತಾರೆ, ಪ್ರಶಾಂತ ಕಾಳೆ, ಕಾಂಗ್ರೆಸ್ ಮುಖಂಡರಾದ ಜಾವೇದ ಬಾಗವಾನ, ಮಹಾಲಿಂಗಪ್ಪ ತಟ್ಟಿಮನಿ, ರಮೇಶ ಹಂಪಿಹೊಳಿ, ನಾರಾಯಣ ಜೋಶಿ, ಮಹಾಲಿಂಗಪ್ಪ ಲಾತೂರ, ಸುಕುಮಾರ ಕೊಟಬಾಗಿ, ಇಬ್ರಾಹಿಂ ಸುತಾರ ಅವರ ಪುತ್ರ ಹುಮಾಯೂನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ