ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ

ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ

ಸಂಕೇಶ್ವರ : ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಮಾಜಿ ಸದಸ್ಯ ಹಾಗೂ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಹಾಗೂ ವೈದ್ಯರಾಗಿ ಹಲವಾರು ದಶಕಗಳ ವರೆಗೆ ಸೇವೆ ಸಲ್ಲಿಸಿದ್ದ ಡಾ. ಡಿ.ಎಚ್. ಮಾಲದಾರ (95) ಅವರು ವಿಧಿವಶರಾಗಿದ್ದಾರೆ. 

     ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಡಿ.ಎಚ್. ಮಾಲದಾರ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದಾರೆ. 

      ಡಾ. ಡಿ.ಎಚ್.ಮಾಲದಾರ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಸದಸ್ಯರಾಗಿ ಹಾಗೂ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯರಾಗಿ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯರಾಗಿ ಹಾಗೂ ಸಂಕೇಶ್ವರ ಪುರಸಭೆ ಉಪಾಧ್ಯಕ್ಷರಾಗಿ, ಪಟ್ಟಣದ ಪ್ರಖ್ಯಾತ ವೈದ್ಯರಾಗಿ ಕಾರ್ಯ ಮಾಡಿದ್ದಾರೆ. 

      1963ರಲ್ಲಿ 1ರಿಂದ 2 ರೂಪಾಯಿಗಳಲ್ಲಿ ಜನರಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರಾಗಿ ಸೇವೆ ಪ್ರಾರಂಬಿಸಿದರು. ಇವರ ಇಬ್ಬರು ಪುತ್ರರು ಕೂಡಾ ವೈದ್ಯರಾಗಿ ಕಾರ್ಯ ಮಾಡುತ್ತಿದ್ದು, ಹಿರಿಯ ಪುತ್ರ ಡಾ. ಹಸನ್ ಮಾಲದಾರ ಅವರು ಹೊರದೇಶದಲ್ಲಿ ವೈದ್ಯರಾಗಿದ್ದಾರೆ. ಅಲ್ಲದೆ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ವೈದ್ಯರಾಗಿ ಕಾರ್ಯ ಮಾಡುತ್ತಿರುವ ಡಾ. ಅರೀಫ್ ಮಾಲದಾರ ಅವರ ತಂದೆಯಾಗಿದ್ದರು. 

    ಮೃತರು ತಮ್ಮ ಹಿಂದೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಹೊಂದಿದ್ದರು. 

   ಮೃತರ ಅಂತ್ಯಕ್ರಿಯೆಯು ಸಂಕೇಶ್ವರದ ನಿಡಸೋಸಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

      

 

ಸುದ್ದಿ ಓದಿ