ಎಲಬುರ್ಗ

ದುರಾಡಳಿತ ಸರಕಾರವನ್ನು ಬುಡ ಸಮೇತ ಕಿತ್ತು ಹಾಕಿ: ಮಾಜಿ ಸಿಎಂ ಸಿದ್ದರಾಮಯ್ಯರಿಂದ ವ್ಯಂಗ್ಯ

ದುರಾಡಳಿತ ಸರಕಾರವನ್ನು ಬುಡ ಸಮೇತ  ಕಿತ್ತು ಹಾಕಿ: ಮಾಜಿ ಸಿಎಂ ಸಿದ್ದರಾಮಯ್ಯರಿಂದ ವ್ಯಂಗ್ಯ

ಯಲಬುರ್ಗಾ (ಕೊಪ್ಪಳ)21: ರಾಜ್ಯದಲ್ಲಿ ಅಧಿಕಾರ ನಡೆಸುವ ಬಿಜೆಪಿ ಸರಕಾರ ದುರಾಡಳಿತದಿಂದ ನಡೆಸುತ್ತಿದ್ದು ಬುಡ ಸಮೇತ ಕಿತ್ತು ಎಸೆಗಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು. 

ಪಟ್ಟಣದಲ್ಲಿ ನಡೆದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‌-19 2ನೇ ಅಲೆಯಲ್ಲಿ ರಾಜ್ಯದ ಜನತೆಗೆ ಸ್ಪಂದಿಸುವಂತಹ ಕಾರ್ಯವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮಾಡಿಲ್ಲ, ಕೋವಿಡ್ ದಿಸೆಯಲ್ಲಿ ರಾಜ್ಯದ ಜನೆತೆಗೆ  ಆಕ್ಸಿಜನ್, ಬೆಡ್, ರೆಡೆಮಿಸಿವಿರ್ ನೀಡಲು ಸರಕಾರ ಸಂಪೂರ್ಣ ವಿಫಲವಾಗಿದೆ. ಈಗಾಗಲೇ ಬಿಜೆಪಿ ಸರಕಾರದ ಶಾಸಕರಿಂದ ಮುಖ್ಯಮಂತ್ರಿ ಬಿ,.ಎಸ್‌.ಯಡಿಯೂರ​‍್ಪ ಹಾಗೂ ಅವರ ಪುತ್ರ ಬಿ.ವೈ.ವಿಜೇಂದ್ರ ಭ್ರಷ್ಟಚಾರದಲ್ಲಿ ತಾಂಡಾವದಲ್ಲಿನ  ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುವಕರಿಗೆ 30 ಲಕ್ಷ ಉದ್ಯೋಗ ಸೃಷ್ಠಿಸಿಲ್ಲ. ಪ್ರತಿಯೊಬ್ಬರಿಗೂ 15 ಲಕ್ಷ ರೂ. ಹಣ ಹಾಕುವಲ್ಲಿ ವಿಫಲರಾಗಿದ್ದು, ದೇಶದಲ್ಲಿ ಈಗಾಗಲೇ ಧವಸ ಧಾನ್ಯಗಳ ಆಹಾರ ಬೆಲೆಗಳ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಡೀಸೆಲ್, ಪೆಟ್ರೋಲ್, ವಿದ್ಯುತ್‌.ಎಲ್‌ಪಿಜಿ ಗ್ಯಾಸ್, ಅಡುಗೆ ಎಣ್ಣೆಗಳ ಬೆಲೆ  ಏರಿಕೆಯಿಂದ ಬಡ ಜನತೆ ಬದುಕಲು ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಸರಕಾರಗಳ ದುರಾಡಳಿತವೇ ಕಾರಣವಾಗಿದೆ ಎಂದು ಟೀಕಿಸಿದರು. 


ಸುದ್ದಿ ಓದಿ