ಮಹಲಿಂಗಪುರ

ಜಾತಿ ಬೇಧ ಮರೆತು ಸೌಹಾರ್ಧಯುತವಾಗಿ ಹೋಲಿ ಆಚರಿಸಿ: ಎಸೈ ಬೀಳಗಿ

ಜಾತಿ ಬೇಧ ಮರೆತು ಸೌಹಾರ್ಧಯುತವಾಗಿ ಹೋಲಿ ಆಚರಿಸಿ: ಎಸೈ ಬೀಳಗಿ

ಹೋಳಿಹುಣ್ಣಿಮೆ ಸಲುವಾಗಿ ಠಾಣೆಯಲ್ಲಿ ಶಾಂತಿ ಸಭೆ

ಮಹಾಲಿಂಗಪುರ ; ಬರುವ ಹೋಳಿ ಹಬ್ಬವನ್ನು ಜಾತಿ ಬೇದ ಮರೆತು, ಎಲ್ಲರೂ ಒಂದು ಎಂದು ತಿಳಿದು ಸೌಹಾರ್ಧಯುತವಾಗಿ ಹಬ್ಬ ಆಚರಿಸಿರಿ ಎಂದು ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬೀಳಗಿ ಹೇಳಿದರು. 

ಸ್ಥಳೀಯ ಪೊಲೀಸ ಠಾಣೆಯಲ್ಲಿ ಹೋಳಿ ಹುಣ್ಣಿಮೆ ನಿಮಿತ್ಯ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಊರು,ನಮ್ಮ ಜನ,ನಮ್ಮ ಆಚರಣೆಗಳನ್ನು ಗೌರವದಿಂದ ಕಾಣಬೇಕು, ಎಲ್ಲ ಹಬ್ಬಗಳನ್ನು ಸಂತಸದಿಂದ ಆಚರಿಸಬೇಕು, ಇದು ವರೆಗೂ ನಡೆದ ಎಲ್ಲ ಕಾರ್ಯಕ್ರಮಗಳನ್ನು ಅತಿ ಶಾಂತ ರೀತಿಯಿಂದ ಆಚರಿಸುತ್ತಾ ಬಂದಿದ್ದೀರಿ, ಈ ಬಣ್ಣದ ಹಬ್ಬವನ್ನು ಸಹ ಅದೇ ರೀತಿ ಆಚರಣೆ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೇಚ್ಚರಿಗೆ ವಹಿಸಿ, ಅಂಥವರು ಕಂಡುಬಂದಲ್ಲಿ ಕೂಡಲೇ ಠಾಣೆಗೆ ತಿಳಿಸಿರಿ. ಮತ್ತು ನೀವು ನಡೆಸು ಹಲಗೆ ಹಬ್ಬ ಯಾವ ಸಮಯಕ್ಕೆ ಪ್ರಾರಂಭ ಮತ್ತು ಎಲ್ಲಿಗೆ ಮುಕ್ತಾಯ, ಯಾವ ಯಾವ ವೃತ್ತದಲ್ಲಿ ಸಂಚಾರ ಮಾಡುತ್ತಿರಿ ಎಂಬುದರ ವಿವಿದ ವಿವರಗಳನ್ನು ಮೊದಲೆ ಠಾಣೆಯಲ್ಲಿ ತಿಳಿಸತಕ್ಕದ್ದು.ಒಟ್ಟಿನಲ್ಲಿ ಎಲ್ಲರೂ ಸೇರಿ ಹೋಳಿ ಹಬ್ಬವನ್ನು ಸಂತಸದಿಂದ ಆಚರಿಸುವ ಹಾಗೆ ಮಾಡೋಣ ಎಂದರು. 

   ನಂತರ ಮಾತನಾಡಿದ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಪ್ರತಿವರ್ಷ ಎಲ್ಲ ಹಬ್ಬಗಳನ್ನು ಸಹ ನಾವು ಅತಿಸಂತಸದಿಂದ ಯಾವುದೇ ರೀತಿಯ ಗಲಾಟೆಗಳಾಗದ ಹಾಗೆ ಮಾಡಿಕೊಂಡು ಬಂದಿರುತ್ತೇವೆ ಅದೇ ರೀತಿ ಈ ವರ್ಷವೂ ಕೂಡಾ ಸೌಹಾರ್ಧತೆಯಿಂದ ಹೋಳಿ ಹಬ್ಬವನ್ನು ಆಚರಿಸುತ್ತೇವೆ, ನಿಮ್ಮ ಸಹಕಾರ ಅತ್ಯವಶ್ಯವಾಗಿ ಬೇಕು, ನೀವು ಠಾಣೆಯಲ್ಲಿಯೇ ಇರಿ ನಾವು ಯಾವುದೇ ತರಹದ ಗಲಾಟೆ ಮಾಡದೆ ನಮ್ಮ ನಮ್ಮ ಪದ್ದತಿ ಪ್ರಕಾರ ಹೋಳಿ ಹಬ್ಬವನ್ನು ಆಚರಿಸುತ್ತೇವೆ ನಿಮಗೆ ಇದರ ಬಗ್ಗೆ ಸ್ವಲ್ಪವೂ ತೊಂದರೆ ಕೊಡುವುದಿಲ್ಲ, ಇದು ನಮ್ಮ ಸಂಪ್ರದಾಯ ಎಂದರು.

   ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಸಜನಸಾಬ ಪೆಂಡಾರಿ, ಐ ಎಮ ಮಠಪತಿ, ಕೆ.ಇ.ಬಿ ಸಿಬ್ಬಂದಿ ಪತ್ತಾರ ಇವರು ಮಾತನಾಡಿದರು. 

 ಜಮೀರ ಯಕ್ಷಂಬಿ, ರಾಜೇಶ ಬಾವಿಕಟ್ಟಿ, ಮಹಾಲಿಂಗ ಮುಗಳಖೋಡ, ಬಂದು ಪಕಾಲಿ, ಪ್ರಶಾಂತ ಮುಖ್ಯನ್ನವರ, ಭೀಮಶಿ ಗೌಂಡಿ, ಶಿವು ಹುನಶ್ಯಾಳ, ಮಡಿವಾಳ, ಅನೀಲ ಕಿರಿಕಿರಿ, ಬಸವರಾಜ ಬಂಡಿವಡ್ಡರ, ಪಾರೂಖ ಪಕಾಲಿ, ರವಿ ಅಂಕುಶಿ, ಜೆ.ಜಿ ಪಾಟೀಲ,ಪರಸು ಮೇತ್ರಿ, ಆರ್.ಆರ್ ಕಾಂಬಳೆ, ಇಮರಾಣ ಪನಿಬಂಧ, ಎಸ್.ಎಸ್ ಪೂಜಾರಿ, ಶ್ರೀಶೈಲ ಔರಸಂಗ, ಮಾರುತಿ ಕರೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಸುದ್ದಿ ಓದಿ