ನೀರಾವರಿಗೆ,ಕೃಷಿಗೆ ಪ್ರಥಮ ಆದ್ಯತೆ: ಕಾರಜೋಳ
ಮುಧೋಳ: ವೈಜ್ಞಾನಿಕ ಕೃಷಿ ಹಾಗೂ ನೀರಾವರಿಗೆ ತಾವು ಪ್ರಥಮ ಆದ್ಯತೆ ನೀಡುತ್ತಾ ಬಂದಿರುವುದು ನಿಮ್ಮ ಕಣ್ಣ ಮುಂದೆ ಇದೇ ಈ ಭಾಗದ ಮಹತ್ವಾಕಾಂಕ್ಷೆಯ ಸಸಾಲಟ್ಟಿ ಹಾಗೂ ಮಂಟೂರ ಎತ ನೀರಾವರಿ ಯೋಜನೆಗೆ ಇದೇ 22 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಅವರು ಗುರುವಾರ ಸಂಜೆ ಕೃಷಿ ಇಲಾಖೆಯ ಆವರಣದಲ್ಲಿ ಫಲಾನುಭವಿಗಳಿಗೆ 3.26 ಕೋಟಿ ರೂ ಕೃಷಿ ಉಪಕರಣಗಳ ವಿತರಣೆ ಹಾಗೂ ಸಾಧಕ ರೈತರನ್ನು ಗೌರವಿಸಿ ಮಾತನಾಡಿ ರೈತ ಮಕ್ಕಳಿಗೆ ವಿದ್ಯಾನಿಧಿ ಶಿಷ್ಯ ವೇತನ, ಕಿಸಾನ್ ಸನ್ಮಾನ್ ಯೋಜನೆ ಹಣ ಯಾವ ಮಧ್ಯವರ್ತಿಗಳಿಲ್ಲದೆ ರೈತರ ಖಾತೆಗೆ ಜಮಾ ಆಗುತ್ತಿದೆ. ಇದರಿಂದ ರೈತರು ಹರ್ಷಗೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಕುಳಲಿ ಗ್ರಾಮದ ಶಂಕರ ಗಣಿ, ಶಿರೋಳ ಗ್ರಾಮದ ಸೋಮಲಿಂಗ ಮದರಖಂಡಿ, ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತ ಪಡೆದ ವರ್ಚಗಲ್ ಗ್ರಾಮದ ಬಸನಗೌಡ ಪಾಟೀಲ,ಕುಳಲಿ ಗ್ರಾಮದ ಶಂಭು ಬೆಳಗಾವಿ, ಹಲಗಲಿ ಗ್ರಾಮದ ಮಹಾದೇವ ಮೆಳ್ಳಿಗೇರಿ, ಮುಗಳಖೋಡ ಗ್ರಾಮದ ಮಲ್ಲಿಕಾರ್ಜುನ ಹುಂಡೆಕಾರ, ಬೆಳಗಲಿ ಗ್ರಾಮದ ಬಾಳಕೃಷ್ಣ ಮಾಳವದೆ ಅವರನ್ನು ಗೌರವಿಸಲಾಯಿತು.
2021-22 ರ ರೈತ ವಿದ್ಯಾನಿಧಿ ಫಲಾನುಭವಿ ವಿದ್ಯಾರ್ಥಿಗಳಾದ ಸ್ವಪ್ನಾ ಕಾಳೆ, ಅಕ್ಷತಾ ದಡ್ಡಿಮನಿ, ಪವಿತ್ರಾ ಕದಂ, ಕಿರಣ ಪಿಚೇಲಿ, ತಿಪ್ಪಣ್ಣ ಭಂಗಿ, ಪ್ರವೀಣ ಕೋಮಾರ, ಸ್ನೇಹಾ ಗಂಗರಡ್ಡಿ, ಸ್ನೇಹಾ ಸುತಾರ, ಗುಂದೇಶ ಬನ್ನಕೊಪ್ಪ ಇವರಿಗೆ ಶಿಷ್ಯ ವೇತನದ ಚಕ್ ವಿತರಿಸಲಾಯಿತು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ಸಹಾಯಕ ನಿರ್ದೇಶಕ ಬಿ.ವಿ.ದಾಸರ, ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಮುಖಂಡರಾದ ಕೆ,ಆರ್.ಮಾಚಪ್ಪನವರ, ಹಣಮಂತ ತುಳಸಿಗೇರಿ, ನಾಗಪ್ಪ ಅಂಬಿ, ಅನಂತರಾವ ಘೋರೆ್ಡ, ಶ್ರೀಶೈಲಗೌಡ ಪಾಟೀಲ ಮುಂತಾದವರು ಇದ್ದರು.
ಮುಧೋಳಧ ಕೃಷಿ ಇಲಾಖೆಯ ಆವರಣದಲ್ಲಿ ಗುರುವಾರ ಸಂಜೆ 3.26 ಕೋಟಿ ಮೌಲ್ಯದ ಕೃಷಿ ಉಪಕರಣಗಳನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಫಲಾನುಭವಿಗಳಿಗೆ ವಿತರಿಸಿದರು
ಪೋಟೋ;ಎಮ್ಡಿಎಲ್-5-3; ಮುಧೋಳಧ ಕೃಷಿ ಇಲಾಖೆಯ ಆವರಣದಲ್ಲಿ ಗುರುವಾರ ಸಂಜೆ ರೈತ ಸಾಧಕರನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗೌರವಿಸಿದರು.