ಸಿರುಗುಪ್ಪ

ಕನ್ನಡ ಭಾಷೆ ಸಂವಹನಕ್ಕೆ ಸರ್ಕಾರ ಕನ್ನಡಿಗರಿಗೆ ರಾಜ್ಯೋತ್ಸವ ಕೊಡುಗೆ

ಕನ್ನಡ ಭಾಷೆ  ಸಂವಹನಕ್ಕೆ ಸರ್ಕಾರ ಕನ್ನಡಿಗರಿಗೆ ರಾಜ್ಯೋತ್ಸವ ಕೊಡುಗೆ

ಸಿರುಗುಪ್ಪ ಸೆಪ್ಟೆಂಬರ್ 15: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜತೆಯಲ್ಲಿ ಹಿಂದಿನ ತಂತ್ರಜ್ಞಾನಕ್ಕೆಒಗ್ಗಿಸುವ ಪ್ರಯತ್ನಕ್ಕೆ ಕೈ ಹಾಕಿರುವ ರಾಜ್ಯ ಸರಕಾರ ನವೆಂಬರ್ ಒಂದರಿಂದಲೇ' ನಾವು ನಮ್ಮ ಭಾಷೆ -ಸಂವಹನ' ಎಂಬ ರಾಜ್ಯೋತ್ಸವದ ಉಡುಗೊರೆಯನ್ನು ಕನ್ನಡಿಗರಿಗೆ ನೀಡಲು ಸಂಕಲ್ಪ ತೊಟ್ಟಿದೆ .ಆಡಳಿತ ಸೇರಿ ಸಾರ್ವಜನಿಕ ಸೇವೆಯಲ್ಲಿ ಅಲ್ಪ ಸ್ವಲ್ಪ ಬಳಕೆಯಾಗುತ್ತಿರುವ ಇಂಗ್ಲಿಷ್ ಅನ್ನು ಬದಿಗೊತ್ತಿ ಸ್ವತಂತ್ರವಾಗಿ ಕನ್ನಡವನ್ನೇ ಸಂಪೂರ್ಣವಾಗಿ ಬಳಸಲು ಅನುವಾಗುವಂತೆ ತಜ್ಞರ ಜತೆಗೂಡಿ ಹೊಸ ತಂತ್ರಾಂಶ ಸಿದ್ಧಪಡಿಸುವ ಕಾರ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೈ ಹಾಕಿದೆ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಜಾಗೃತಿ ಕಾವಲು ಸಮಿತಿ ಸದಸ್ಯರಾದ ಎ ಅಬ್ದುಲ್ ನಬಿ ತಿಳಿಸಿದ್ದಾರೆ .ಸರ್ಕಾರದ ಸೂಚನೆ ಮೇರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರ ಪ್ರಯತ್ನ ನಡೆಸಿದ ಫಲವಾಗಿ ಹೊಸ ತಂತ್ರಾಂಶಗಳು ಸಿದ್ಧವಾಗಿವೆ ವಿವಿಧ ಇಲಾಖೆಗಳ ಜಾಲತಾಣಗಳು ಕನ್ನಡದಲ್ಲಿಯೇ ಇರಬೇಕೆಂಬ ಆಶಯದೊಂದಿಗೆ ಆರಂಭಿಸಿದ ಪ್ರಯತ್ನ ಹೊಸ ಹೊಸ ತಂತ್ರಾಂಶ ಸಿದ್ಧಪಡಿಸುವುದಕ್ಕೆ ವೇದಿಕೆಯಾಗಿದೆ ತಂತ್ರಜ್ಞಾನ ಬೆಳೆದಂತೆ ಕನ್ನಡವನ್ನು ಅದಕ್ಕೆ ಹೊಂದಿಸುವ ಪ್ರಯತ್ನಕ್ಕೆ ಯಶಸ್ಸು ಸಿಗಲಾರಂಭಿಸಿದೆ .


ಈ ಮೇಲ್ ಯು ಆರ್ ಎಲ್ : ಇ ಮೇಲ್ ವಿಳಾಸವನ್ನು  ಇಂಗ್ಲೀಷ್ ನಲ್ಲಿ ಬರೆಯಲಾಗುತ್ತಿದೆ. ಯಾದರೂ ಕನ್ನಡದಲ್ಲೂ ಬರೆಯುವ ಪ್ರಯತ್ನ ಮಾಡಲಾಗುತ್ತದೆ ವೆಬ್ ವಿಳಾಸವನ್ನು ಕನ್ನಡದಲ್ಲಿಯೇ ನೀಡಲಾಗುತ್ತದೆ .ಯು ಆರ್ ಎಲ್  ಒದಗಿಸುವ ಅಂತರ ರಾಷ್ಟ್ರೀಯ ಸಂಸ್ಥೆಗಳು ಪ್ರಾದೇಶಿಕ ಭಾಷೆಗಳಲ್ಲಿ ಸೌಲಭ್ಯ ನೀಡುತ್ತಿವೆ. ಆ ನಿಟ್ಟಿನಲ್ಲಿ ಮಾತುಕತೆ ಫಲಪ್ರದ ವಾಗಿದೆ ಪ್ರಕಟಿಸಿದೆ ಎಂದು ಅಬ್ದುಲ್ ನಬಿ ತಿಳಿಸಿದರು .


ಅಂತರ ರಾಷ್ಟ್ರೀಯ ಸಾಕ್ಷರತಾ ಸಪ್ತಾಹದ ಅಂಗವಾಗಿ ಮನುಷ್ಯನ ಬದುಕಿನಲ್ಲಿ ಆರೋಗ್ಯವಂತ ಮತ್ತು ಶಿಕ್ಷಣ ಪಡೆದ ವ್ಯಕ್ತಿ ಪ್ರಬಲವಾಗಿರುತ್ತಾರೆ ಅನಕ್ಷರಸ್ಥರನ್ನು ಸಾಕ್ಷರ ರನ್ನಾಗಿಸುವಲ್ಲಿ ಸ್ವಯಂ ಸೇವಕರ ಪಾತ್ರ ಮುಖ್ಯ ಎಂದು ಸಾಕ್ಷರತಾ ಅಬ್ದುಲ್ ನಬಿ ಮತ್ತು ತಾಲ್ಲೂಕು ಸಾಕ್ಷರತಾ ಸಂಯೋಜಕ ರಾದ .ಎ ಬಿ ವಿರೂಪಾಕ್ಷಪ್ಪ ಹೇಳಿದರು .ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಎ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಷಾದ್ ಅಲಿ ಮೊಹಮ್ಮದ್ ನಿಜಾಮುದ್ದೀನ್ ಮೊಹಮ್ಮದ್ ಹಾಜಿ ಬಿ ಗೌಸಿಯಾ ಇತರರು ಹಾಜರಿದ್ದರು .


ಸುದ್ದಿ ಓದಿ