ಸರಕಾರ ಜಾರಿಗೊಳಿಸಿದ ನಿಯಮ ತಪ್ಪದೆ ಪಾಲಿಸಿ
ರಾಮದುರ್ಗ 17: ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಕೊರೊನಾ ರೋಗ ಉಲ್ಬಣಗೊಂಡ ಪರಿಣಾಮ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ಒಂದು ವಾರ ಕಾಲದವರೆಗೆ ಸಿಲ್ ಡೌನ್ ಮಾಡಲಾಗಿದೆ, ಕೃಷಿ ಚುಟುವಟೆಕಗೆ ಹೊರತುಪಡಿಸಿ ಎಲ್ಲವೂ ಗ್ರಾಮದಲ್ಲಿ ನಿರ್ಭಂದಿಸಲಾಗಿದೆ ಗ್ರಾಮಸ್ಥರು ಕೊರೊನಾ ತಡೆಗಟ್ಟಲು ಕೈಜೋಡಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಮನವಿ ಮಾಡಿದರು.
ತಾಲೂಕಿನ ಸುನ್ನಾಳ ಗ್ರಾಮಕ್ಕೆ ತಾಲೂಕ ಆಡಳಿತದೊಂದಿಗೆ ಬೇಟಿ ನೀಡಿ ಸಿಲ್ ಡೌನ ಘೊಷನೆ ಮಾಡಿ ಮಾತನಾಡಿದ ಅವರು ಬದುಕಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಕಾರಣ ಅಮೂಲ್ಯವಾದ ಜೀವನವನ್ನು ರಕ್ಷೀಸಿಕೊಳ್ಳಲು ಸರಕಾರ ಜಾರಿಗೊಳಿಸಿದ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು. ಕೊರೊನಾ ದೃಡ ಪಟ್ಟರೆ ಬಯ ಪಡುವ ಅವಶ್ಯಕತೆ ಇಲ್ಲಾ, ರಾಮದುರ್ಗದ ಬಿಸಿಎಮ್ ವಸತಿ ನಿಲಯದಲ್ಲಿ ಕೊವಿಡ್ ಕೇರ್ ಸೆಂಟರ ಪ್ರಾರಂಭಿಸಲಾಗಿದೆ ರೋಗ ಗುಣವಾಗುವವರೆಗೂ ಉತ್ತಮ ಊಟ ಹಾಗೂ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲಾಗುತ್ತದೆ ಎಂದು ಸೈರ್ಯ ತುಂಬಿದರು. ಸಿಲ್ ಡೌನ್ ಅವದಿ ಮುಗಿದ ನಂತರ ಮನೆಮನೆಗೆ ವೈದ್ಯರನ್ನು ಕಳುಹಿಸಿ ಮತ್ತೊಂದು ಎಲ್ಲರ ಆರೋಗ್ಯ ಪರಿಕ್ಷೀಸಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ತಿಳಿಸಿದರು.
ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕ ಆಡಳಿತ ರೆಮಿಡಿಸಿವರ, ಆಕ್ಸಜನ್, ಜೌಷದಿ ಹಾಗೂ ಸಾಕಷ್ಟು ಬೆಡಗಳ ವೈವಸ್ಥೆ ಮಾಡಲಾಗಿದೆ, ಸಿಲ ಡೌನ್ ಮಾಡಿದ್ದು ಗ್ರಾಮಸ್ಥರ ಹಿತದೃಷ್ಟಿಯಿಂದಾ ಎಂಬುದನ್ನು ಎಲ್ಲರೂ ಅರಿತು ನಿಯಮಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲಾ ಹಂಚಿ ಕೊರೊನಾ ತಡೆಗಟ್ಟಲು ಪಾಲಿಸಬೇಕಾದ ನಿಯಮಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿ. ಗ್ರಾಮದ ಮುಂಖಡರಾದ ವಾಚ್ ಪಾಟೀಲ, ಬಿ ಎಘ್ ಬಿಸಿಡೋಣಿ, ಬಾಪುಗೌಡ ಪಾಟೀಲ ತಾಲೂಕ ವೈದ್ಯಾಧಿಕಾರ ಡಾ. ಮೃತ್ಯುಂಜಯ ತಡಹಾಳ. ಡಿಎಸ್ಪಿ ರಾಮಗನಗೌಡ ಹಟ್ಟಿ ಹಾಗೂ ಗ್ರಾಮದ ಯುವಕರು ಹಾಜರಿದ್ದರು.