ಹೂವಿನ ಹಡಗಲಿ

ಹೂವಿನಹಡಗಲಿ: ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

ಹೂವಿನಹಡಗಲಿ: ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

ಲೋಕದರ್ಶನ ವರದಿ 

ಹೂವಿನಹಡಗಲಿ 28 :  ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ತಾಲೂಕಿನಾದ್ಯಂತ ಗುರುವಾರ ಮುಸ್ಲಿಮರು ಸಂಭ್ರಮ, ಸಡಗರದಿಂದ ಆಚರಿಸಿದರು.ಪಟ್ಟಣದ  ಮಸೀದಿಯಲ್ಲಿ ಮುಂಜಾನೆಯ ಪ್ರಾರ್ಥನೆಯೊಂದಿಗೆ ಹಬ್ಬದ ಸಡಗರ ಕಳೆಗಟ್ಟಿತ್ತು. ಬೆಳಗ್ಗೆ 8.30ಕ್ಕೆ ಮಸೀದಿಯ ಮುಂಭಾಗ ಇಡೀ ಪಟ್ಟಣದ ಮುಸಲ್ಮಾನರು ಒಂದೆಡೆ ಸೇರಿ ದೇವರನಾಮ ಗಳನ್ನುಹಾಡಿದರು. ನಂತರ ಎಪಿಎಂಸಿ ಬಳಿ ಇರುವ ಈದ್ದಾ ಮೈದಾನದಲ್ಲಿ ಒಟ್ಟಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮುಸ್ಲಿಂ ಧರ್ಮಗುರುಗಳು ಹಬ್ಬದ ಧಾರ್ಮಿಕ ವಿಧಿಗಳು, ಇದರ ಮಹತ್ವದ ಬಗ್ಗೆ ಪ್ರವಚನ ನೀಡಿದರು. ನಂತರ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಂಡಿತು. ಬಣ್ಣಬಣ್ಣದ ಪೋಷಾಕುಗಳನ್ನು ಧರಿಸಿದ ಚಿಣ್ಣರು ಗಮನ ಸೆಳೆದರು.

ಪರಸ್ಪರರು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಜಾನುವಾರುಗಳನ್ನು ಬಲಿಕೊಡುವ ಮೂಲಕ ಹಬ್ಬ ಸಂಪನ್ನಗೊಂಡಿತು. ಈದ್ಗಾ ಕಮಿಟಿಯ. ಕಾರ್ಯದರ್ಶಿ ಕಪಾಲಿ ಮೂಸಿನ್‌. ಉಪಾಧ್ಯಕ್ಷ ಚಾಂದ್ ಬಾಷಾ. ಸದಸ್ಯರುಗಳಾದ. ಮಾಡ್ರನ್ ಖಾಜಾ. ನಜೀರ್ ಸಾಬ್‌. ರಾಯದುರ್ಗ ಭಾಷಾ. ಮುಸ್ಲಿಂ ಸಮಾಜದ. ಮುಖಂಡರುಗಳಾದ. . ವಾರದ ಗೌಸ್ ಮದಿನ. ಚಾಂದ್ ಸಾಬ್‌. ಕಾಗದಗೌಸ್ ಮದಿನ್, ಟೈಲರ್ ಗೌಸಾಬ್‌. ಹೆಚ್ ಶೇಕ್ ಮಹಮ್ಮದ್‌. ಮಸೀದಿಯ ಮುಖ್ಯಸ್ಥರು.  ಮೌಲಿಗಳು. ಹಾಗೂ. ಪಟ್ಟಣದ ಎಲ್ಲಾ ಮುಸ್ಲಿಂ ಬಾಂಧವರು ಇದ್ದರು.ಹಜರತ್ಶಂಶೋದ್ದೀನ್ ಖಾಜಿ. ಹಾಗೂ. ಹಜರತ್‌. ಮಕ್ಬುಲ್‌. ಕುರಾನ್  ಪಠಿಸಿದರು. ಹಾಗೂ ಹಜರತ್‌. ಮುಕ್ತಿ. ಮಹಮ್ಮದ್ ಅಜರುದ್ದೀನ್‌. ಸಾಮೂಹಿಕ ಪ್ರಾರ್ಥನೆ ಮಾಡಿಸಿದರು. 


ಸುದ್ದಿ ಓದಿ