ಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾರಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ

ಅಥಣಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾರಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ಸಲಕರಣೆಗಳು ಬೆಂಕಿಗೆ ಆಹುತಿ

ಬೆಳಗಾವಿ, ಜ, 19 : ಜಿಲ್ಲೆಯ ಅಥಣಿಯ ಹೊರವಲಯದ 110 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾರಿ ಬೆಂಕಿ ಅವಘೆ ಸಂಭವಿಸಿ ವಿದ್ಯುತ್ ಟಿಸಿ ಸೇರಿದಂತೆ ಸಲಕರಣೆಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ನಡೆದಿದೆ.

   ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಕೆಎಬಿ ಕೇಂದ್ರದಲ್ಲಿ ಇಂದು ಈ ಬೆಂಕಿ ಅವಘಡ ನಡೆದಿದ್ದು, ಬಾರಿ ಶಬ್ದದೊಂದಿಗೆ ಕೆಇಬಿ ಟ್ರಾನ್ಸ್ಫಾರ್ಮರ್ ಸ್ಪೋಟಗೊಂಡಿದೆ. ಶಬ್ದ ಬರುತ್ತಿದ್ದಂತೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅಪಾರವಾಗಿ ಬೆಂಕಿ ಕೆಂಗ ಕೆನ್ನಾಲಿಗೆ ಸುಟ್ಟು ಕರಕಲಾದ ಅಥಣಿ 110 ವಿದ್ಯುತ್ ವಿತರಣಾ ಕೇಂದ್ರ.

      ವಿಜಯಪೂರ ಅಥಣಿ ಮಾರ್ಗದ ಪಕ್ಕದಲ್ಲಿರುವ ೧೧೦ ಕೆಎಬಿ ಕೇಂದ್ರದಲ್ಲಿ ಈ ಬೆಂಕಿ ಅವಘಡ ನಡೆದಿದೆ. ಬಾರಿ ಪ್ರಮಾಣದ ಬೆಂಕಿ ಜೊತೆಗೆ ಹೋಗಿ ಆವರಣದಿಂದ ಪಟ್ಟಣದಲ್ಲಿ ಕೆಲಕಾಲ ಆಂತಕ ಸೃಷ್ಟಿಯಾಗಿತ್ತು. ಅಲ್ಲದೆ ಕೆಲವು ಗಂಟೆಗಳ ಕಾಲ್ ವಿಜಯಪುರ ಅಥಣಿ ರಸ್ತೆ ಬಂದ ಮಾಡಲಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮಾಹಿತಿ ಬಂದಿದೆ.

ಸುದ್ದಿ ಓದಿ