ಕರ್ಕಶ ಶಬ್ದ ಹೊಂದಿರುವ ಬೈಕ್ ಸೈಲೆನ್ಸರ್‌ಗೆ ದಂಡ
ಕೊಲ್ಹಾರ 01: ಕರ್ಕಶ ಶಬ್ದ ಹೊಂದಿರುವ ಬೈಕ್ ಸೈಲೆನ್ಸರ್ ಪೈಪ್ ಗಳ ಕೂಲಿಂಗ್ ಗ್ಲಾಸ್ ಕಾರು ಚಾಲಕರಿಗೆ ತಾಲೂಕಿನ ಕೂಡಗಿ ಪೋಲಿಸ್ ಠಾಣೆ ಪಿಎಸ್‌ಐ ಯತೀಶ ಕೆ.ಎನ್ ಶನಿವಾರ ದಂಡ ವಿಧಿಸಿ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೊಲ್ಹಾರ ತಾಳಿಕೋಟಿ ರಾಜ್ಯ ಹೆದ್ದಾರಿ ತೆಲಗಿ 18ನೇ ಕ್ರಾಸ್ ಬಳಿ ಅನಾವಶ್ಯಕ ಕರ್ಕಶ ದ್ವನಿಯನುಂಟು ಮಾಡುವ ಸೈಲೆನ್ಸ್ ರ ಅಳವಡಿಸಿದ ಬೈಕ್ ಸವಾರರಿಗೆ ಪೈನ್ ಹಾಕಿ ಸೈಲೆನ್ಸ್‌ರ್ ಗಳನ್ನ ವಶಕ್ಕೆ ಪಡೆದು ದ್ವಂಸ ಮಾಡಿದ್ದಾರೆ. ಕೂಲಿಂಗ ಗ್ಲಾಸ್ ಇರುವ ಚಾಲಕರಿಗೂ ದಂಡ ವಿಧಿಸಿ ಕೂಲಿಂಗ್ ಗ್ಲಾಸ್ ಕಿತ್ತು ಹಾಕಿ ಇದು ಕಾನೂನು ಬಾಹಿರವಾಗಿದ್ದು ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುತ್ತವೆ. ಕಾನೂನು ನಿಷೇಧ ಹೇರಲಾಗಿದ್ದರೂ ಕೆಲವರು ಬೇಜವಾಬ್ದಾರಿ ತೋರಿ ಇದೆ ರೀತಿ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಎಸ್.ಪಿ. ಲೋಗಾವಿ,, ಎಸ್.ಬಿ. ನಿಂಗನೂರ, ಆರಿ್ಪ. ಉಪ್ಪಲದಿನ್ನಿ, ಇತರ ಸಿಬ್ಬಂದಿಗಳು ಇದ್ದರು.