ಮೃತ ಸಾಲಗಾರ ಕುಟುಂಬಕ್ಕೆ ಧನ ಸಹಾಯ
ಕೊಲ್ಹಾರ 28: ಯಕ್ಸಂಬಾದ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಕೊಲ್ಹಾರ ಶಾಖೆ ಸಂಸ್ಥೆಯ ಅಮೂಲ್ಯ ಸಾಲಗಾರರಾದ ಡೊಂಗ್ರಿಮಾ ಮಹಮ್ಮದ ನದಾಫ್ ಇವರ ಗಂಡ ಮಹಮ್ಮದ ಇಮಾಮಾಸಾಬ ನದಾಫ ಇವರು 2025 ಸೆಪ್ಟೆಂಬರ್ 10 ರಂದು ಮರಣ ಹೊಂದಿದ್ದ ಹಿನ್ನೆಲೆಯಲ್ಲಿ ವಾರಸುದಾರರಿಗೆ ನಮ್ಮ ಸಂಸ್ಥೆಯ ಸದಸ್ಯರ ಕಲ್ಯಾಣ ನಿಧಿಯಿಂದ 30,000 ಸಾವಿರ ರೂಪಾಯಿಗಳ ಧನಸಹಾಯ ಮಂಜೂರಾತಿ ಪತ್ರವನ್ನು ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ರಮೇಶ ಕುಂಬಾರ, ಸದಸ್ಯರಾದ ಈಶ್ವರ್ಪ ತುಂಬರಮಟ್ಟಿ ನೀಡಿದರು. ಇದೇ ಸಂದರ್ಭದಲ್ಲಿ ಸಂಗಪ್ಪ ಚೌಡಪ್ಪಗೋಳ, ನಾಗಪ್ಪ ಹುಚ್ಚಪ್ಪಗೋಳ, ಕೆ,ಬಿ, ಕಂಬಿ ಸೇರಿದಂತೆ ಶಾಖೆಯ ವ್ಯವಸ್ಥಾಪಕ ಎಸ್, ಕೆ, ಕಮತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.