ಕೊನೆಗು ಕಾಂಗ್ರೆಸ್ ನ 124 ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರು ಪೈನಲ್, ಕೈ ಪಟ್ಟಿ ಬಿಡುಗಡೆ : ಬೆಳಗಾವಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ
ಬೆಳಗಾವಿ : ರಾಜ್ಯದಲ್ಲಿ ಚುನಾವಣೆಯ ಕಾವು ದಿನ ದಿನಕ್ಕೆ ಏರಿಕೆಯಾಗುತ್ತಿದ್ದು, ಇತ್ತ ರಾಜಕೀಯ ಪಕ್ಷಗಳಲ್ಲಿ ಕೂಡಾ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ಗಳು ನಡೆಯುತ್ತಿವೆ. ಅದರಂತೆ ಇಂದು ಕಾಂಗ್ರೆಸ್ ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಬೆಳಗಾವಿ ಇದರಲ್ಲಿ ಬೆಳಗಾವಿ ಜಿಲ್ಲೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರುಣಾದಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ.
ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳು : ಚಿಕ್ಕೋಡಿ-ಗಣೇಶ ಹುಕ್ಕೇರಿ, ಕಾಗವಾಡ-ರಾಜು ಕಾಗೆ, ಕುಡಚಿ-ಮಹೇಂದ್ರ ತಮ್ಮಣ್ಣವರ, ಹುಕ್ಕೇರಿ-ಎ.ಬಿ. ಪಾಟೀಲ, ಯಮಕನಮರಡಿ-ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಲಕ್ಷ್ಮೀ ಹೆಬ್ಬಾಳಕರ್, ಖಾನಾಪುರ-ಡಾ. ಅಂಜಲಿ ನಿಂಬಾಳ್ಕರ್, ಬೈಲಹೊಂಗಲ-ಮಹಾಂತೇಶ ಕೌಜಲಗಿ, ರಾಮದುರ್ಗ-ಅಶೋಕ ಪಟ್ಟಣ ಅವರುಗಳಿಗೆ ಟಿಕೆಟ್ ನೀಡಲಾಗಿದೆ.



