ಕಾಶ್ಮೀರದಲ್ಲಿ ಉಗ್ರರು -ಭದ್ರತಾಪಡೆ ನಡುವೆ ಗುಂಡಿನ ಕಾಳಗ
ಶ್ರೀನಗರ, ಜುಲೈ 24 ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರಾದಲ್ಲಿ ಅರಣ್ಯದಲ್ಲಿ ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಶನಿವಾರ ಗುಂಡಿನ ಕಾರ್ಯಾಚರಣೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ವಿಶೇಷ ಕಾರ್ಯಾಚರಣಾ ಗುಂಪು (ಎಸ್‌ಒಜಿ) ದ ರಾಷ್ಟ್ರೀಯ ರೈಫಲ್ಸ್ ಪಡೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿಶೋಧನಾ ಕಾರ್ಯದಲ್ಲಿ ನಿರತವಾಗಿದ್ದಾಗ ಕಾಡಿನಲ್ಲಿ ಅಡಗಿದ್ದ ಉಗ್ರರು ಏಕಾ ಏಕಿ ಗುಂಡು ಮನಬಂದಂತೆ ಗುಂಡು ಹಾರಿಸಿದರು.
ಉಗ್ರರು ಕಾಡಿನಲ್ಲಿ ಅಡಗಿಕೊಂಡು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧನಾ ಕಾರ್ಯ ಗುಂಡಿನ ಚಕಮಕಿಯಾಗಿ ಪರಿವರ್ತನೆಗೊಂಡಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಯೋಧರು ಉಗ್ರರ ವಿರುಧ್ಧಂ ಪ್ರತೀಕಾರ ತೀರಿಸಿಕೊಂಡರು, ಶೋಧನಾ ಕಾರ್ಯ ಬಿಗಿಗೊಳಿಸಲಾಗಿದ್ದು, ಸ್ಥಳಕ್ಕೆ ಭದ್ರತಾ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದ್, ಹೆಚ್ಚಿನ ವಿವರ ಕಾಯಲಾಗುತ್ತಿದೆ ಎಂದು ಅವರು ಹೇಳಿದರು.