ಫೆನ್ಸಿಂಗ್: ಭವಾನಿದೇವಿ ಹೋರಾಟ ಅಂತ್ಯ

ಫೆನ್ಸಿಂಗ್: ಭವಾನಿದೇವಿ ಹೋರಾಟ ಅಂತ್ಯ

 
ಟೋಕಿಯೋ: ಭರವಸೆ ಹುಟ್ಟು ಹಾಕಿದ್ದ ಭಾರತದ ಭವಾನಿ ದೇವಿ ಸೇಬರ್ ಫೆನ್ಸಿಂಗ್‌ನ 32ನೇ ಸುತ್ತಿನಲ್ಲಿ ಸೋಲು ಅನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
 
ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಮ್ಯಾನೊನ್ ಬ್ರುನೆಟ್ 15-7 ರಿಂದ ಭವಾನಿ ದೇವಿಯನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿದರು.
 
ಒಲಂಪಿಕ್‌ನಲ್ಲಿ ಭಾರತದ ಮೊದಲ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭವಾನಿದೇವಿ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಟ್ಯುನಿಯಾದ ನಾಡಿಯಾ ಬೆನ್ ಅಜಿಜಿ ಅವರನ್ನು 15-3 ರಿಂದ ಸುಲಭವಾಗಿ ಸೋಲಿಸಿ ಅಪೂರ್ವ ಸಾಧನೆಯೊಂದಿಗೆ ಮುನ್ನಡೆದಿದ್ದರು.

ಸುದ್ದಿ ಓದಿ