ಪತ್ರಕರ್ತ ಶರಣಪ್ಪ ಪಾಟೀಲ್ಗೆ ಸನ್ಮಾನ
ಯಲಬುರ್ಗಾ 29: ಕಳೆದ 18 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪರ್ತಕರ್ತ ಸ. ಶರಣಪ್ಪ ಪಾಟೀಲ್ ರವರ ಪತ್ರಿಕೋಧ್ಯಮದಲ್ಲಿ ಅವರ ಅನುಪಮ ಸೇವೆ ಗುರುತಿಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಪಟ್ಟಣದ ಎಸ್.ಎ. ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿಣಿ ಎಂ.ಸಾಧಿಕ ಅಲಿ ಹಿರಿಯ ಪತ್ರಕರ್ತ ಜಿ.ಎಸ್.ಗೋನಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಹಿರಿಯ ಪತ್ರಕರ್ತ ಉಮಾಶಂಕರ ಹಿರೇಮಠ, ಸಂತೋಷ ಬಂಡ್ರಿ, ಶಿವು ಮ್ಯಾಗೇರಿ, ವಿರೇಶ ಸ್ಟಾಂಪಿನ್, ದೊಡ್ಡಬಸಪ್ಪ ಹಕಾರಿ, ದೇವರಾಜ ದೊಡ್ಡಮನಿ, ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ, ಕಾರ್ಯದರ್ಶಿ ಮಲ್ಲಪ್ಪ ಮಾಟರಂಗಿ, ಇನ್ನಿತರರು ಉಪಸ್ಥಿತರಿದ್ದರು.