ಪೂರ್ಣಿಮಾ ಸಂಕೇತಗೆ ಸನ್ಮಾನ
ಯಲಬುರ್ಗಾ 08: ಪಟ್ಟಣದಲ್ಲಿ ಮೊಗ್ಗಿಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ ಯುವ ಧುರಿಣ ಸಂಕೇತ ದೊಡ್ಡನಗೌಡ ಓಜನಹಳ್ಳಿ ಹಾಗೂ ಶ್ರೀಮತಿ ಪೂರ್ಣಿಮಾ ಓಜನಹಳ್ಳಿ ಇವರಿಗೆ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವ ಸಮೀತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಕೇತ ದೊಡ್ಡನಗೌಡ ಓಜನಹಳ್ಳಿ ನಮ್ಮ ತಂದೆಯವರಾದ ದೊಡ್ಡನಗೌಡ ಓಜನಹಳ್ಳಿ ಇವರು ತಾಲೂಕಿನಲ್ಲಿ ಕನ್ನಡಪರ ಕಾರ್ಯಕ್ರಮಗಳ ಮೂಲಕ ಕನ್ನಡಾಂಭೆಯ ಸೇವೆ ಸಲ್ಲಿಸಿದ್ದು ಅದರಂತೆ ನಾನು ಸಹ ಮುಂದಿನ ದಿನಮಾನಗಳಲ್ಲಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಅಮರ್ಪ ಕಲಬುರಗಿ, ಸುರೇಶಗೌಡ ಶಿವನಗೌಡ್ರ, ಬಸವರಾಜ ಅಧಿಕಾರಿ, ಸಣ್ಮುಖಪ್ಪ ರಾಂಪೂರ ಬಸಲಿಂಗಪ್ಪ ಕೊತ್ತಲ ಮಂಜುನಾಥ ಅಧಿಕಾರಿ ಇನ್ನಿತರರು ಉಪಸ್ಥಿತರಿದ್ದರು.