ಮಹಲಿಂಗಪುರ

ಅಪ್ಪನಿಲ್ಲದ ಸಾಧಕ ಮಕ್ಕಳಿಗೆ ಸಹಾಯ ಹಸ್ತ ನೀಡಿ ಅಪ್ಪಂದಿರ ದಿನಾಚರಣೆ

ಅಪ್ಪನಿಲ್ಲದ  ಸಾಧಕ ಮಕ್ಕಳಿಗೆ ಸಹಾಯ ಹಸ್ತ ನೀಡಿ ಅಪ್ಪಂದಿರ ದಿನಾಚರಣೆ

ಸೈದಾಪೂರ್‌- ಸಮೀರ್ವಾಡಿ22:  ಮಹಾಲಿಂಗಪುರ  ಸಮೀಪದ ಎಸ್  ಸಿ ಪಿ ಪ್ರೌಢಶಾಲೆಯ 1992 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಅತ್ಯಂತ ಭಾವಪೂರ್ಣ ಹಾಗೂ ಹೃದಯಸ್ಪರ್ಶಿ ಮತ್ತು ಮಾದರಿ ಕಾರ್ಯಕ್ಕೆ ಸಾಕ್ಷಿಯಾದರು.ಇತ್ತೀಚಿಗೆ ಅಗಲಿದ ಗೆಳೆಯರಾದ ಮಹಾಲಿಂಗ ವಲ್ಯಪುರ ಹಾಗೂ ಈರ​‍್ಪ ಹುಲಕುಂದ ಇವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಾನುವಾರ ಸ್ಥಳೀಯ ಟೊಣಪಿನಾಥ ಸಭಾಭವನದಲ್ಲಿ ಹಮ್ಮಿಕೊಂಡು ಇದೇ ಕಾರ್ಯಕ್ರಮದಲ್ಲಿ ಅಪ್ಪನನ್ನು ಕಳೆದುಕೊಂಡು ಅನಾಥರಾಗಿದ್ದರೂ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದು  ಸಾಧನೆ ಮಾಡಿದ ಜೆಸಿ ಶಾಲೆಯ ನಂದನ ಮಲ್ಲಾಪುರ ಹಾಗೂ ಬಸವಾನಂದ ಶಾಲೆಯ ಸೋನಿ ಮುಗಳಖೋಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವ ಮೂಲಕ ಅಪ್ಪಂದಿರ ದಿನಕ್ಕೆ ಹೊಸ ಅರ್ಥವನ್ನು ನೀಡಿದರು ಮತ್ತು ಅಗಲಿದ ಸ್ನೇಹಿತರ ಕುಟುಂಬ ಮತ್ತು ಮಕ್ಕಳಿಗೆ ಅಪ್ಪನಿಲ್ಲದ ಕೊರಗು ಕಾಡದಂತೆ ಸದಾ ಕಾಲ ಸಹಾಯ ಹಸ್ತ ನೀಡುತ್ತಾ ಸರ್ವ ರೀತಿಯ ಸಹಾಯ ಮಾಡಲು ತೀರ್ಮಾನಿಸಿದ್ದು ಅನುರಕಣನೀಯ. ಅದೆಲ್ಲಕ್ಕಿಂತಲೂ ಹೆಚ್ಚಾಗಿ 32 ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಓದಿದ ಸ್ನೇಹಿತರ ಬಳಗದ ಶಿಕ್ಷಕ ಮಹಾಲಿಂಗ ವಲ್ಯಪುರ ಅವರ ಅಗಲಿಕೆಯನ್ನು ನೆನೆದು ಇಡೀ ಮಿತ್ರ ಬಳಗ ಕಣ್ಣೀರು ಹಾಕಿತು ಅದರಲ್ಲಿಯೂ ಅವರನ್ನು ಪುನೀತ್ ರಾಜಕುಮಾರ್ ಅವರಿಗೆ ಹೋಲಿಕೆ ಮಾಡಿ ಮಾಡಿದ ಅವರ ಗುಣಗಾನ, ವೇದನೆ ಹೃದಯ ಹಿಂಡುವಂತಿತ್ತು ಡಾ. ಮಹಾದೇವ ಕದ್ದಿಮನಿ ಮತ್ತು ಈರ​‍್ಪ ಮುಂಡಗನೂರ, ಮಹಾಲಿಂಗ ಮೇದಾರ, ಶಿಕ್ಷಕ ಪಾಂಡು ಹಂಪಿಹೊಳಿ  ಮಾತನಾಡಿ ಗೆಳೆಯ ಮಹಾಲಿಂಗ ಒಬ್ಬ ತತ್ವಜ್ಞಾನಿ, ವಿಜ್ಞಾನಿ, ಗಣಿತಜ್ಞ, ಸಾಹಿತಿ ಒಟ್ಟಾರೆಯಾಗಿ ಜೀನಿಯಸ್ ಆಗಿದ್ದ ಆತನನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ ಎಂದು ಕಣ್ಣೀರು ಹಾಕಿದರು. ಅಗಲಿದ ಗೆಳೆಯರಿಗೆ ದೀಪ ಬೆಳಗಿಸಿ, ಶೋಕ ಗೀತೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ. ಸಿ.ಎಂ.ವಜ್ರಮಟ್ಟಿ, ಶಶಿಧರ ನಕಾತಿ,  ಚಂದ್ರು ಧರ್ಮಟ್ಟಿ, ಶಿವಾನಂದ ಕರಡಿ, ಸದಾಶಿವ ದಾಸರ, ಭೀಮಶಿ ಗೌಂಡಿ, ವಿಜಯ ಜಂಬಗಿ, ಡಾ. ಅನಿಲ ಬನ್ನೂರ, ಸುಭಾಷ್ ಮಡಿವಾಳ, ಬಿ.ಜಿ.ಸಸಾಲಟ್ಟಿ, ಮಹಾಂತೇಶ ಹಿರೇಮಠ, ಗೀರೀಶ ಯರಗಟ್ಟಿ, ಈಶ್ವರ ಬಾದರದಿನ್ನಿ, ಮಹಾಲಿಂಗ ಮುಗಳಖೋಡ, ಬಸವರಾಜ ಒಂಟಗೋಡಿ,  ಗೀರೀಶ ಮಾಳವಾದೆ, ಶಿವಾನಂದ ಸಾವಳಗಿಮಠ, ರಾಜು ಹುಲಕುಂದ, ವಿನೋದ ಕೊಕಟನೂರ, ಮಲ್ಲಿಕಾರ್ಜುನ ಜಂಬಗಿ ಇತರರು ಇದ್ದರು. ಶಿಕ್ಷಕ  ಶಿವಾನಂದ ಬುರುಡ ನಿರೂಪಿಸಿದರು. 


ಸುದ್ದಿ ಓದಿ