ಬಾಗೇವಾಡಿ ಕಾಲುವೆಗೆ ನೀರು ಹರಿಸಿದ 150 ಕ್ಯೂಸೆಕ್ ರೈತರಿಂದ ಧರಣಿ ವಾಪಸ್
ಸಿರುಗುಪ್ಪ:ತಾಲೂಕಿನ ಬಾಗೇವಾಡಿ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ತುಂಗಭದ್ರಾ ಬಲ ದಂಡೆ ಕೆಳಮಟ್ಟದ ಕಾಲುವೆಯಿಂದ ಬಾಗೇವಾಡಿ ಕಾಲುವೆಗೆ 150 ಕ್ಯೂಸೆಕ್ ನೀರು ಹರಿಸುವಂತೆ ಒತ್ತಾಯಿಸಿ ತುಂಗಭದ್ರಾ ಕೆಳಮಟ್ಟದ ಕಾಲುವೆ ಮೇಲೆ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತೆಕ್ಕಲಕೋಟೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಿ ಹೆಚ್ ಸುಂದರೇಶ್ ಮತ್ತು ನೀರಾವರಿ ಇಲಾಖೆಯ ಎಇಇ ಸುರೇಶ್ ಪೂಜಾರಿ, ಮಂಜುನಾಥ, ತಿಪ್ಪೇಸ್ವಾಮಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಬಾಗೇವಾಡಿ ಕಾಲುವಿಗೆ 150 ಕ್ಯೂಸೆಕ್ ನೀರನ್ನು ಹರಿಸಲಾಯಿತು. ಇದರಿಂದಾಗಿ ರೈತರು ಪ್ರತಿಭಟನೆಯನ್ನು ಕೈಬಿಟ್ಟರು ರೈತ ಮುಖಂಡರಾದ ಮಲ್ಲಿಕಾರ್ಜು ನ, ಜ್ಞಾನ ನಂದ ಸ್ವಾಮಿ, ಕೊಮಾರೆಪ್ಪ, ಮಾಬುಸುಬಾನಿ, ಯು ನಾಗೇಂದ್ರ, ರಾಜಪ್ಪ, ಜಿ ಮಲ್ಲಿಕಾರ್ಜುನ, ಮಹಾಂತಯ್ಯ ಸ್ವಾಮಿ, ಮಂಜುನಾಥ, ಉಸ್ಮಾನ್ ವಿವಿಧ ಗ್ರಾಮಗಳ ರೈತರು ಇದ್ದರು.