ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಸಾಗುವಳಿದಾರರು

ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಸಾಗುವಳಿದಾರರು

ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಸಾಗುವಳಿದಾರರು 

ಹಾವೇರಿ 04: ತಾಲೂಕಿನ ಅಕ್ಕೂರಗ್ರಾಮದ ಸರ್ವೇ ನಂ; 98/2ಇ ದ ಸರಕಾರದ ಬಗರಹುಕುಂ ಗೋಮಾಳದ ಸಾಗುವಳಿ ಜಮೀನಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಕಾಮಗಾರಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ, ಬಗರಹುಕುಂ ಸಮಿತಿಗಳನ್ನು ರಚಿಸಿ ಸಾಗುವಳಿದಾರರಿಗೆ ಪಟ್ಟ ವಿತರಿಸಲು ಕ್ರಮಕೈಗೊಳ್ಳಬೇಕು, ಇಲ್ಲವೇ ತಮಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ತಾಲೂಕಿನ ಅಕ್ಕೂರಗ್ರಾಮದ ಸಾಗುವಳಿದಾರರು ಜು.2ರಂದು ಇಲ್ಲಿನ ತಹಶೀಲ್ದಾರ ಕಚೇರಿಯ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು. ಅಕ್ಕೂರಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರ ಜಾತಿಯ ಭೂರಹಿತ ಕೂಲಿ ಕಾರ್ಮಿಕರು ಗ್ರಾಮದ ಸರಹದ್ದಿನ ಸರ್ವೇ ನಂ;98/2ಇದ್ದ ಹುಲ್ಲುಗಾವಲು ಗೋಮಾಳದ ಜಾಗೆಯಲ್ಲಿ ಕಳೆದ 35-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಈ ಭೂಮಿ ಬಿಟ್ಟರೆ ತಮಗೆ ಜೀವನೋಪಾಯಕ್ಕೆ ಬೇರೆದಾರಿಯಿಲ್ಲ. ಅರ್ಜಿ ಸರ್ಕಾರದ ಪರಿಶೀಲನೆಯಲ್ಲಿ ಇರುವಾಗ ಹೊರಹಾಕಲಾಗದು, ಹೀಗಿದ್ದರು ಸಹ ಪ್ರತಿನಿತ್ಯ ಪೆÇಲೀಸರ ಮೂಲಕ ನಮಗೆ ಕಿರುಕುಳ, ಒತ್ತಡ ಹಾಕಿಸುತ್ತಿದ್ದಾರೆ.ಎಂಬುದು ರೈತರ ಆರೋಪವಾಗಿದೆ. ನಮ್ಮ ಪೂರ್ವಜರ ಕಾಲದಿಂದ ಸಾಗುವಳಿ ಮಾಡಿಕೊಂಡು ಬಂದ ಸದರಿ ಜಮೀನು ಬಿಡಲು ಮನಸ್ಸಿಲ್ಲದೇ ಬಿತ್ತಿಬಳೆದ ಭೂಮಿಯಲ್ಲಿ ನಮಗೆ ದಯಾಮರಣ ಮಾಡಿಕೊಳ್ಳಲು ರಾಷ್ಟ್ರಪತಿಗಳು ಅನುಮತಿ ನೀಡುವಂತೆ ಬಡ ರೈತರಾದ ಬಸವನಗೌಡ ರಾಮನಗೌಡ್ರ, ಯಲ್ಲನಗೌಡ ಮರಿಗೌಡ್ರ, ಪರಮೇಶ ಕೊಂಚಿಗೇರಿ, ಸೋಮಣ್ಣ ರಾಮನೌಡ್ರ, ಪವಿತ್ರಾ ಉದ್ದಣ್ಣನವರ, ಯಲ್ಲಪ್ಪ ಕೊಂಚಿಗೇರಿ, ಮುತ್ತಪ್ಪ ಹರಿಜನ, ರವಿಚಂದ್ರಗೌಡ ಮರಿಗೌಡ್ರ, ಮಂಜಪ್ಪ ಕೊಂಚಿಗೇರಿ, ದುರಗನಗೌಡ ಮರಿಗೌಡ್ರ, ಸಂತೋಷಗೌಡ ಮರಿಗೌಡ್ರ ಸೇರಿದಂತೆ ಅನೇಕರು ಶುಕ್ರವಾರ ತಹಶೀಲ್ದಾರ ಕಾರ್ಯಲಯದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ವಿವಿಧ ಕಾಮಗಾರಿಗಳಿಗಾಗಿ ಈ ಜಮೀಮನನ್ನು ಕಾಯ್ದರಿಸಲಾಗಿದೆ. ಆದರೆ ಉಳಿಮೆ ಮಾಡುವ ಜಮೀನನಲ್ಲಿ ಕಾಮಗಾರಿ ಮಾಡಬಾರದು ಹಾಗೇನಾದರೂ ಮಾಡಲೇ ಬೇಕಾದ ಅನಿವಾರ್ಯ ತೆ ಇದ್ದರೆ ಸಾಗುವಳಿದಾರರಿಗೆ ಪ್ರತಿಯೊಬ್ಬರಿಗೂ ಸರಕಾರದ ನಿಯಮದಂತೆ 3 ಎಕರೆ ಜಮೀನನ್ನು ಕೊಟ್ಟು ಉಳಿದ ಜಮೀನನಲ್ಲಿ  ಕಾಮಗಾರಿ ನಡೆಸಲಿ ಜೊತೆಗೆ ಬಗರುಹುಕುಂ ಕಾಯ್ದೆ ಅಡಿಯಲ್ಲಿ  ಸಾಗುವಳಿದಾರರ ಹೆಸರಿಗೆ ಜಮೀನು ದಾಖಲಿಸಿ ಅವರಿಗೆ ಪಟ್ಟಾ ನೀಡಿ ಆ ನಂತರ ಉಳಿದ ಭೂಮಿ ಯಲ್ಲಿ ಕಾಮಗಾರಿ ನಡೆಸಲಿ ಎಂದು ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ  ಆಗ್ರಹಿಸಿದರು.     

ರೈತರ ಆರೋಪ ಸುಳ್ಳು : ಶಾಸಕ ಒಲೇಕಾರ ಅಕ್ಕೂರ ಗ್ರಾಮದ ಸರ್ವೆ ನಂ98/2 ರ ಸುಮಾರು 146 ಸರಕಾರಿ ಜಮೀನನಲ್ಲಿ ಯಾವೊಬ್ಬ ರೈತರು ಸಹ 20 ವರ್ಷಗಳಿಂದ ಉಳುಮೆ ಮಾಡಿಲ್ಲ. ಅಲ್ಲಿ ಉಳಿಮೆ ಮಾಡುತ್ತಿರುವರೆಲ್ಲರೂ ಜಮೀನು ಉಳ್ಳುವರಾಗಿದ್ದು ಅವರ ಆರೋಪ ಸುಳ್ಳಾಗಿದ್ದು. ಕಾನೂನು ಪ್ರಕಾರ ಜಮೀನು ಇಲ್ಲದವರಿಗೆ 1 ಎಕರೆ ಜಮೀನು ನೀಡಲಾಗುವುದು. ಉಳುಮೆ ಮಾಡುವ ಸ್ಥಳವನ್ನು ಬಿಟ್ಟು ನವೋದಯ ಶಾಲೆ ಹಾಗೂ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ನೆಹರು ಒಲೇಕಾರ ತಿಳಿಸಿದರು. ಬಗರ್ ಹುಕುಂ ಅರ್ಜಿಗಳು ಪರಿಶೀಲಿನೆಯಲ್ಲಿವೆ ಬಗರ್ ಹುಕಂ ಸಾಗುವಳಿ ಮಾಡಿದ ರೈತರು ಸಲ್ಲಿಸಿದ ಅರ್ಜಿಗಳು ಪರೀಶಿಲನೆ ಹಂತದಲ್ಲಿವೆ. ಈಗಾಗಲೇ ಅಕ್ರಮ ಸಕ್ರಮ ಸಮಿತಿ ರಚಿಸಿದ್ದು ಅವರ ವಿವರಣೆ ಪಡೆದು ಮಂದಿನ ಕ್ರಮ ಜರುಗಿಸಲಾಗುವದು.

ಸುದ್ದಿ ಓದಿ