ಮೊದಲ ಕಂತಿನ 3.5 ಸಾವಿರ ಮುಂಗಡ ಹಣಕ್ಕೆ ಒತ್ತಾಯಿಸಿ, ಇಂದು ಗುರ್ಲಾಪೂರದಲ್ಲಿ ರೈತರ ಬ್ರಹತ್ ಪ್ರತಿಭಟನೆ
ಮೊದಲ ಕಂತಿನ 3.5 ಸಾವಿರ ಮುಂಗಡ ಹಣಕ್ಕೆ ಒತ್ತಾಯಿಸಿ, ಇಂದು ಗುರ್ಲಾಪೂರದಲ್ಲಿ ರೈತರ ಬ್ರಹತ್ ಪ್ರತಿಭಟನೆ
ಮಹಾಲಿಂಗಪುರ 30 : ಬೆಳಗಾವಿ, ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಗಳ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಮೊದಲ ಕಂತಿನ (ಮುಂಗಡ) 3.5 ಸಾವಿರ ಹಣ ನೀಡುವ ವಾಗ್ದಾನ ಮಾಡಿಯೇ ಸಕ್ಕರೆ ಕಾರ್ಖಾನೆಗಳನ್ನು ಆರಂಬಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಗುರುವಾರ ಮೂಡಲಗಿ ತಾಲೂಕಿನ ಗುರ್ಲಾಪೂರದಲ್ಲಿ ಮೊದಲ ಕಂತಿನ ನಿಗದಿ ಹಣಕ್ಕಾಗಿ ಬ್ರಹತ್ ಪ್ರತಿಭಟನೆ ನಡೆಯಲಿದ್ದು,ಕಾರಣ ಬುಧವಾರ ಸೈದಾಪುರ-ಸಮೀರವಾಡಿ ಕ್ರಾಸ್ ನಲ್ಲಿ ರೈತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರು ಮಹಾಲಿಂಗಪುರ, ಸೈದಾಪುರ-ಸಮೀರವಾಡಿ, ಮೂಡಲಗಿ ಇನ್ನಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಗುರ್ಲಾಪೂರಕ್ಕೆ ಬಂದು ನಮ್ಮ ಹಕ್ಕಿನ ಮುಂಗಡ ಹಣಕ್ಕೆ ಒತ್ತಾಯಿಸಲು ಮನವಿ ಮಾಡಿದರು.
ಗುರುವಾರ ನಡೆಯುವ ಪ್ರತಿಭಟನೆಯಲ್ಲಿ ಉಸ್ತುವಾರಿ ಮಂತ್ರಿ, ಮೂರು ಜಿಲ್ಲೆಗಳ ಸಕ್ಕರೆ ಕಾರ್ಖಾನೆ ಮಾಲೀಕರು ಸ್ಥಳಕ್ಕೆ ಆಗಮಿಸಿ ರೈತರ ಬೇಡಿಕೆ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತದೆ ಎಂದರು.
ರೈತ ಸಂಘ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಅಂಗಡಿ, ರಾಜ್ಯ ಸಂಚಾಲಕರು ಬಾಬುರಾವ್ ಪಾಟೀಲ್ ಮತ್ತು ರೈತ ಪರ ಹೋರಾಟಗಾರರಾದ ಶಿವಲಿಂಗಪ್ಪ ಕೌಜಲಗಿ ಮಾತನಾಡಿದರು.
ರಮೇಶ್ ಕೊಲ್ಲಾರ್,ರಾಯಭಾಗ ತಾಲೂಕ ಅಧ್ಯಕ್ಷರು ಪಾಂಡು ವೀರಣಗಡ್ಡಿ, ವಿವೇಕ್ ಗಂಟಿ, ತಮ್ಮಣ್ಣ ಪಾಟೀಲ್, ಪರಸಪ್ಪ ಚಿನಗುಂಡಿ ಹಾಗೂ ಸೈದಾಪುರ ಗ್ರಾಮದ ಮುಖಂಡರಾದ ಬಸವಣ್ಣಪ್ಪ ಬ್ಯಾಳಿ, ನಾಗಪ್ಪ ಕೇತಗೌಡ, ಮುತ್ತಪ್ಪ ಪಾಶ್ಚಾಪೂರ,ಸದಾಶಿವ ಬಾಡಗಿ, ಸಿದ್ಧಾರೂಢ ಕೌಜಲಗಿ, ಮುದುಕಪ್ಪ ಗುಳ್ಳೆಗಡ್ಡಿ ಹಾಗೂ ಸೈದಾಪುರದ ಎಲ್ಲ ರೈತರು, ಮುಖಂಡರು ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಮಾರ್ಗದರ್ಶನ ನೀಡಿದರು.