ಜಾನುವಾರು ಕಳ್ಳತನ ಪತ್ತೆಗೆ ಕ್ರಮ ಕೈಗೊಳ್ಳಲು ಒತ್ತಾಯ: ರೈತ ಸಂಘ
ಲೋಕದರ್ಶನ ವರದಿ
ಹೂವಿನಹಡಗಲಿ 12: ತಾಲೂಕಿನ ನಾನಾ ಕಡೆಗಳಲ್ಲಿ ಜಾನುವಾರು ಮತ್ತು ಎತ್ತುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಪೊಲೀಸ್ ಇಲಾಖೆ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.ತಾಲೂಕಿನ ಹೊಳಗುಂದಿ ಗ್ರಾಮದ ಕೆ.ಎಂ. ಶಿವಕುಮಾರ ಅವರಿಗೆ ಸೇರಿದ್ದ ಕಣದಲ್ಲಿ ಇದ್ದ 2 ಲಕ್ಷ ಮೌಲ್ಯದ 2 ಎತ್ತುಗಳು, ಬೀರಬ್ಬಿ ಗ್ರಾಮದ ದಿನಕರ ಹಾಗೂ ಪಟ್ಟಣದ ಹೊನ್ನೂರು ರಸ್ತೆಯಲ್ಲಿನ ಜಾನುವಾರು ಕಳ್ಳತನವಾಗಿದೆ. ಜೀವನೋಪಾಯಕ್ಕಾಗಿ ಎತ್ತುಗಳನ್ನು ರೈತರು ಸಾಕುತ್ತಿದ್ದರು. ಆದರೆ, ಕಳ್ಳರ ಕಾಟಕ್ಕೆ ರೈತರು ರೋಸಿ ಹೋಗಿದ್ದಾರೆ. ಆದ್ದರಿಂದ ರೈತರ ಜಾನುವಾರು ಮತ್ತು ಎತ್ತುಗಳನ್ನು ಪತ್ತೆ ಮಾಡಬೇಕೆ0ದು ಮನವಿ ಸಲ್ಲಿಸಿದ್ದಾರೆ. ಜಾನುವಾರು ಮತ್ತುಸಂಘದ ತಾಲೂಕು ಅಧ್ಯಕ್ಷ ಎಚ್. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಜಯಪ್ಪ, ಕೆ. ಮಂಜುನಾಥ, ಹುಲುಗಪ್ಪ, ಮೆಹಬೂಬ್ ಸಾಬ್, ಕೆ.ಎಂ. ಶಿವಕುಮಾರ, ಗೀರೀಶ ಸೇರಿದಂತೆ ಇತರರು ಸಿಪಿಐ ಮಲ್ಲಪ್ಪ ಹೂಗಾರ ಇವರಿಗೆ ಮನವಿ ಪತ್ರ ಸಲ್ಲಿಸಿದರು.