ಮಹಲಿಂಗಪುರ

ಹೋಮ್ ವರ್ಕ್‌ ಸಮೇತ ಮಕ್ಕಳಿಗೆ ಬೀಳ್ಕೊಡುಗೆ

ಹೋಮ್ ವರ್ಕ್‌ ಸಮೇತ ಮಕ್ಕಳಿಗೆ ಬೀಳ್ಕೊಡುಗೆ

ಮಹಾಲಿಂಗಪುರ 16: ಸಮೀಪದ ನಂದಗಾಂವ ವಸ್ತಿ (ಗುರವ್ ತೋಟದ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ 5ನೇ ತರಗತಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಯಿತು.  ಫಲಿತಾಂಶ ಘೋಷಣೆೆ, ಪಾಲಕರೊಂದಿಗೆ ಸಮಾಲೋಚನೆ, ಸಮುದಾಯದತ್ತ ಕಾರ್ಯಕ್ರಮ, ರಜೆಯಲ್ಲಿ ಮಕ್ಕಳಿಗೆ ಹೋಂವರ್ಕ್‌ ಬುಕ್ ವಿತರಿಸುವ, ಶಾಲಾ ದಾಖಲಾತಿ ಆರಂಭಿಸುವ ಹಾಗೂ ರಜೆಯಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ತರಗತಿ ಹಮ್ಮಿಕೊಳ್ಳುವ ಪ್ರಕ್ರಿಯೆ ನಡೆಸಲಾಯಿತು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಅಭ್ಯಾಸ ಪರಿಕರಗಳನ್ನು ವಿತರಿಸಿದರು.  ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಗೊಂದಿ, ಸ್ಕೌಟ್ಸ್‌ ಕ್ಯಾಪ್ಟನ್ ಎಸ್‌.ಜಿ.ಜುಟನಟ್ಟಿ, ಶಿಕ್ಷಕ ಸೋಮು ಕಂಬಳಿ, ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮಸ್ಥರು, ಪಾಲಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ