ಕುಕನೂರ್

ಕುಕನೂರ ಘಟಕ ವಯೋನಿವೃತಿ ಶಿವರಾಜ್ ಪಾಟೀಲ್ ಬೀಳ್ಕೊಡಿಗೆ

ಕುಕನೂರ ಘಟಕ ವಯೋನಿವೃತಿ ಶಿವರಾಜ್ ಪಾಟೀಲ್ ಬೀಳ್ಕೊಡಿಗೆ

ಕುಕನೂರ 01: ಘಟಕದ ಪ್ರಭಾರಿ ವ್ಯವಸ್ಥಾಪಕರಾದ ಶಿವರಾಜ್ ಪಾಟೀಲರು 1989ರಂದು ಕೆಕೆಆರ್ಟಿಸಿಯಲ್ಲಿ  ಮೆಕ್ಯಾನಿಕ್ ಆಗಿ ಸೇವೆ ಆರಂಭವಾಗಿ ಇಂದಿಗೆ 33ವರ್ಷಗಳಾಗಿ ವಯೋನಿವೃತ್ತಿ ಹೊಂದುತ್ತಿರುವ ಶಿವರಾಜ್ ಪಾಟೀಲ್ ಅವರಿಗೆ ನಾನಾ ವಿಭಾಗದಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ವಿಭಾಗದಲ್ಲಿ ಸೇವೆ ಸಲ್ಲಿಸಿ ಕುಕನೂರು ಘಟಕದಲ್ಲಿ ಪ್ರವಾರಿ ಘಟಕ ವ್ಯವಸ್ಥಾಪಕರಾಗಿ ಸೇವಿ ಸಲ್ಲಿಸಿ ಕಾರ್ಮಿಕರು ಮತ್ತು ಸಿಬ್ಬಂದಿಗಳ ನಡುವಿನ ಸಂಬಂಧಗಳು ತಂದೆ ಮಕ್ಕಳ ಸಂಬಂಧವಾಗಿ ಯಾವ ಕಾರ್ಮಿಕರಿಗೂ ತೊಂದರೆ ಕೊಡದ ಹಾಗೆ ಸೇವೆ ಸಲ್ಲಿಸುತ್ತಾ ಬಂದಿರುವ ಶಿವರಾಜ್ ಪಾಟೀಲರಿಗೆ ವಯೋನಿವೃತ್ತಿ ಜೀವನವನ್ನು ಪರಮಾತ್ಮನು ಸದಾ ಸುಖವಾಗಿ ಸಂತೋಷದಿಂದ ಬಾಳಲಿ ಎಂದು ಕೊಪ್ಪಳ ವಿಭಾಗದ ನಿಯಂತ್ರಣ ಅಧಿಕಾರಿಗಳಾದ (ಕೆಕೆಆರ್ ಟಿಸಿ ಡಿಸಿ) ವೆಂಕಟೇಶ್ ಯಾದವ್ ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಸಂಚಾರಿ ನಿಯಂತ್ರಣ ಅಧಿಕಾರಿಗಳಾದ (ಡಿಟಿಒ) ಆರ್ ಜಾದವ್ ಮತ್ತು ಕಾರ್ಯಗಾರದ (ಡಿಎಮ್ ಇ) ಶಿಲ್ಪಿಗಳಾದ ಮಲ್ಲಿಕಾರ್ಜುನ್ ಮತ್ತು ವಿಭಾಗೀಯ ಭದ್ರತಾ ಅಧಿಕಾರಿಗಳಾದ (ಡಿಎಸ್‌ಆಯ್) ಎಚ್ ಕೆ ಮಲ್ಲಿಕಾರ್ಜುನ್ ಭದ್ರತಾ ಸಹಾಯಕರು ಕೆ ರಾಮಣ್ಣ ಕೊರವರ್ ಮತ್ತು ಕೊಪ್ಪಳ ವಿಭಾಗದ ಎಲ್ಲಾ ಘಟಕ ವ್ಯವಸ್ಥಾಪಕರುಗಳು ಮತ್ತು ಅಧಿಕಾರಿಗಳು ಸಿಬ್ಬಂದಿ ವರ್ಗದವರು  ಕಾರ್ಮಿಕರು ಡ್ರೈವರ್ಸ್‌ ಕಂಡಕ್ಟರ್ಗಳು ಮತ್ತು ಪ್ರವಾರಿ ಘಟಕ ವ್ಯವಸ್ಥಾಪಕರ ಬಂಧು ಬಳಗದವರು ಮತ್ತು ಶಿಕ್ಷಕರ ಬಳಗದವರು ಈ ಕಾರ್ಯಕ್ರಮದಲ್ಲಿ ಯುವ ಘಟಕ ವ್ಯವಸ್ಥಾಪಕರಾದ ಸುನೀಲ್ ಐದ್ರಿ ಅವರು ಪ್ರಸ್ತಾವಿಕವಾಗಿ  ಮಾತನಾಡಿದರು ಮತ್ತು ವಿಭಾಗೀಯ ಭದ್ರತಾ ರಕ್ಷಕರು ಉಪಸ್ಥಿತರಿದ್ದರು 


ಸುದ್ದಿ ಓದಿ