ಮಹಲಿಂಗಪುರ

ಆತಂಕ-ಭಯವಿಲ್ಲದೇ ಪರೀಕ್ಷೆ ಎದುರಿಸಿ : ಎಸ್.ಕೆ.ಗಿಂಡೆ

ಆತಂಕ-ಭಯವಿಲ್ಲದೇ ಪರೀಕ್ಷೆ ಎದುರಿಸಿ : ಎಸ್.ಕೆ.ಗಿಂಡೆ

ಮಹಾಲಿಂಗಪುರ: ರಾಜ್ಯ ಸರ್ಕಾರದ ಆದೇಶದಂತೆ ಇದೇ ಮಾರ್ಚ 13 ರಿಂದ 18ರವರೆಗೆ 5 ಮತ್ತು 8ನೇ ತರಗತಿಯ ಮಕ್ಕಳಿಗೆ ಮೌಲ್ಯಾಂಕನ ಪಬ್ಲಿಕ್ ಪರೀಕ್ಷೆಗಳು ನಡೆಯಲಿವೆ. ಮಕ್ಕಳು ಯಾವುದೇ ಆತಂಕ ಮತ್ತು ಭಯವಿಲ್ಲದೇ ಪರೀಕ್ಷೆಗಳನ್ನು ಎದುರಿಸಬೇಕೆಂದು ಮುಖ್ಯಗುರು ಎಸ್.ಕೆ.ಗಿಂಡೆ ಹೇಳಿದರು.

ಪಟ್ಟಣದ ಬಸವಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ 5 ಮತ್ತು 8 ತರಗತಿ ವಿದ್ಯಾರ್ಥಿಗಳು ಮತ್ತು ಪಾಲಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಎಸ್ಎಸ್ಎಲ್ಸಿ ಪರೀಕ್ಷೆಯ ಮಾದರಿಯಂತೆಯೇ ಪರೀಕ್ಷೆಗಳು ನಡೆಯುತ್ತವೆ. ಪಾಲಕರು ಮಕ್ಕಳಿಗೆ ಮನೆಯಲ್ಲಿ ಅಭ್ಯಾಸ ಮತ್ತು ಪರೀಕ್ಷೆಯ ಸಿದ್ದತೆಗಳ ಕುರಿತು ಮಕ್ಕಳಿಗೆ ಧೈರ್ಯ ನೀಡಬೇಕು. ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯವು ಹದಗೆಡದಂತೆ ಮುಂಜಾಗ್ರತೆ ವಹಿಸಲು ಕರೆ ನೀಡಿದರು.

ಮೌಲ್ಯಾಂಕನ ಪರೀಕ್ಷೆಗಳು ಮುಗಿದ ನಂತರ ಮಾರ್ಚ 20ರಿಂದ ಶಾಲೆಯಲ್ಲಿನ ವಾರ್ಷಿಕ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಎದುರಿಸಬೇಕು. ಪಾಲಕರು ಸಹ ಮನೆಯಲ್ಲಿ ಮಕ್ಕಳಿಗೆ ಅಭ್ಯಾಸದ ಜೊತೆಗೆ ಅವರಿಗೆ ಸುಲಭವಾಗಿ ಪರೀಕ್ಷೆಗಳನ್ನು ಎದುರಿಸುವಂತೆ ಪ್ರೋತ್ಸಾಹ ಮತ್ತು ನೈತಿಕ ಬೆಂಬಲ ನೀಡಬೇಕು ಎಂದರು. 

ಇದೇ ಸಂದರ್ಭದಲ್ಲಿ 2019ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ಚಂದ್ರಶೇಖರ ಮೋರೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ-ಗೌರವಿಸಲಾಯಿತು.

ಪತ್ರಕರ್ತ ಚಂದ್ರಶೇಖ ಮೋರೆ ಮಾತನಾಡಿ ಮಕ್ಕಳ ಶೈಕ್ಷನೀಕ ಅಭಿವೃದ್ದಿಯಲ್ಲಿ ಶಿಕ್ಷಕರಷ್ಟೇ ಪಾಲಕರು ಜವಾಬ್ದಾರಾಗಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡುವದಕ್ಕಿಂತ ಮಕ್ಕಳಿಗೆ ಸಂಸ್ಕಾರಯುತ ಉತ್ತಮ ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿರಿ. ಅಧ್ಯಾತ್ಮೀಕ ಹಿನ್ನಲೆಯುಳ್ಳ ಬಸವಾನಂದ ಶಾಲೆಯು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ-ಸಂಸ್ಕೃತಿಯನ್ನು ಕಲಿಸುತ್ತಿರುವದು ಸ್ವಾಗತಾರ್ಹ ಎಂದರು.

ಶಾಲೆಯ ಶಿಕ್ಷಕ ಹುಮಾಯೂನ ಸುತಾರ ಮಾತನಾಡಿದರು. ಪಾಲಕರಾದ ಶೇಖರ ಜಗದಾಳ, ರುದ್ರಪ್ಪ ಮಿರ್ಜಿ, ಸವಿತಾ ಮಿರ್ಜಿ ,  ಲಕ್ಷ್ಮೀ ಅಂಬಿ, ಶ್ರೀಮತಿ ಶಿವಲೀಲಾ ಹಣಗಂಡಿ, ಶ್ರೀಮತಿ ಬಂಡಿಗಣಿ, ಶ್ರೀಶೈಲ ಅವಟಿ, ರಾಜೇಂದ್ರ ಮಿಜರ್ಿ, ಮಹಾದೇವ ಭಾವಿಕಟ್ಟಿ, ಮುದಕಪ್ಪ ಯಡ್ರಾಂವಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.


ಸುದ್ದಿ ಓದಿ