ಎಫ್ಎಸ್ಟಿ, ವಿಎಸ್ಎಸ್, ಎಸ್ಎಸ್ಟಿ, ಪೊಲೀಸ್ ತಂಡದವರ ಸಭೆ
ಯಲಬುರ್ಗಾ 14: ವಿಧಾನಸಬೆ ಚುನಾವಣೆ ಹಿನ್ನೆಲೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚಕ್ ಪೋಸ್ಟ್ ಗಳಲ್ಲಿ ತಪಾಸಣೆ ಹೆಚ್ಚಳವಾಗಬೇಕು. ಪ್ರತಿಯೊಂದು ವಾಹನ ತಪಾಸಣೆ ಮಾಡಬೇಕು ಎಂದು ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಹೇಳಿದರು. ಯಲಬುರ್ಗಾ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಎಫ್ಎಸ್ಟಿ, ವಿಎಸ್ಟಿ ಹಾಗೂ ಪೊಲೀಸ್ ತಂಡಗಳ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದವರು ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಕ್ಕಿಂತ ಹೆಚ್ಚು ಬ್ಯಾನರ್ ಅಳವಡಿಸುವುದು, ಸಭೆ ನಡೆಸುವುದು ಮುಂತಾದವುಗಳ ಕಂಡುಬಂದಲ್ಲಿ ತಕ್ಷಣವೇ ಜಾಗೃತರಾಗಿ ವಿಡಿಯೋ ಮಾಡಿ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ಎಲ್ಲ ಅಧಿಕಾರಿಗಳು ಸಿ ವಿಸಿಲ್ ಆ್ಯಪ್ ಬಳಸುವುದು ಹೆಚ್ಚಾಗಬೇಕು. ಎಲ್ಲರೂ ಗಮನವಿಟ್ಟುಕೊಂಡು ಕೆಲಸ ಮಾಡಬೇಕು. ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದರು. ಸಭೆಯಲ್ಲಿ ಎಫ್ಎಸ್ಟಿ, ವಿಎಸ್ಎಸ್, ಎಸ್ಎಸ್ಟಿ, ಪೊಲೀಸ್ ತಂಡದ ಅಧಿಕಾರಿಗಳು ಹಾಜರಿದ್ದರು.