ಭಾರಿ ಮಳೆಗೆ ಬೆಳೆದ ಬೆಳೆಗಳ ಅಪಾರ ಹಾನಿ
ಸಿರುಗುಪ್ಪ 20: ನಿರಂತರ ಸತತವಾಗಿ ಸುರಿದ ಮಳೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಗಳ ಅಪಾರ ಹಾನಿಯಿಂದ ಭಾರೀ ಸಂಕಷ್ಟಕ್ಕೀಡಾಗಿದ್ದಾರೆ ಸರಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ವಿಳಂಬ ಮಾಡದೆ ಸಮೀಕ್ಷೆ ನಡೆಸಿ ಪರಿಹಾರ ವಿತರಣೆ ಮಾಡಬೇಕು ಎಂದು ರೈತರ ಪರ ಸ್ವಾತಂತ್ರ್ಯ ಹೋರಾಟಗಾರ ಸಾಕ್ಷರತಾ ಕಾರ್ಯಕರ್ತ ಎ ಅಬ್ದುಲ್ ನಬಿ ಮನವಿ ಮಾಡಿದ್ದಾರೆ. 24ಗಂಟೆಗಳಲ್ಲಿ ಬಳ್ಳಾರಿ ತಾಲ್ಲೂಕಿನಲ್ಲಿ 10 ಸೆಂಟಿ ಮೀಟರ್ ಮಳೆ ಯಾಗಿದೆ ಸಿರುಗುಪ್ಪ ತಾಲ್ಲೂಕಿನಲ್ಲಿ 2.4 ಸೆಂಟಿ ಮಿಲಿಮೀಟರ್ ಮಳೆ ಯಾಗಿದೆ ಸಂಡೂರು ತಾಲ್ಲೂಕಿನಲ್ಲಿ 2.3 ಸೆಂಟಿ ಮಿಲಿಮೀಟರ್ ಕಂಪ್ಲಿ 2.5 ಸೆಂಟಿ ಮಿಲಿಮೀಟರ್ ಕುರುಗೋಡು 3.1 ಮಳೆಯಾಗಿದೆ ಬಳ್ಳಾರಿ ಹಗರಿ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕದ ಮೂಲಗಳು ಪ್ರಕಟಿಸಿವೆ ಎಂದು ಅಬ್ದುಲ್ ನಬಿ ತಿಳಿಸಿದರು.
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ಭರ್ತಿ ಶುಕ್ರವಾರ ಅಣೆಕಟ್ಟೆಯ ಕ್ರೆಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಹರಿಸಲಾಗಿದೆ ಒಳಹರಿವು ಹೆಚ್ಚಾಗಿದ್ದು 50 ಸಾವಿರಕ್ಕೂ ಕ್ಯೂಸೆಕ್ ಅಧಿಕ ನೀರು ಹರಿದು ಬರುತ್ತಿದೆ 1633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಸಂಪೂರ್ಣ ತುಂಬಿದೆ. 12 ಕ್ರಸ್ಟ್ ಗೇಟ್ ಗಳನ್ನು 2 ಅಡಿ ಮೇಲಕ್ಕೆತ್ತಿ ಐವತ್ತು ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 5ಸಾವಿರ ಕ್ಯೂಸೆಕ್ ನೀರು ಕಾಲುವೆಗಳಿಗೆ ಬಿಡಲಾಗುತ್ತಿದೆ ಸತತವಾಗಿ ಒಳಹರಿವು ಕೂಡ ಹೆಚ್ಚಾಗುತ್ತಿದೆ ನದಿಗೆ 1 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿಸ ಲಾಗುವುದು ಯಾರೂ ನದಿ ಪಾತ್ರದಲ್ಲಿ ಓಡಾಡಬಾರದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಎಚ್ಚರಿಸಿ ಪ್ರಕಟಿಸಿದೆ ಎಂದು ಅಬ್ದುಲ್ ನಬಿ ತಿಳಿಸಿದರು.